


ಡೈಲಿವಾರ್ತೆ: 16/ಜು./2026


ಕಡಿಮೆ ಮೊತ್ತದ ಹೂಡಿಕೆ ಅಧಿಕ ಲಾಭದ ಆಮಿಷಕ್ಕೆ ಲಕ್ಷಾಂತರ ರೂ. ಕಳೆದುಕೊಂಡ ಉಡುಪಿ ವ್ಯಕ್ತಿ.!

ಉಡುಪಿ: ಫೇಸ್ಬುಕ್ ನಲ್ಲಿ ಕಡಿಮೆ ಮೊತ್ತದ ಹೂಡಿಕೆ ಮಾಡಿ ಅಧಿಕ ಲಾಭಗಳಿಸುವುದಾಗಿ ನೀಡಿದ್ದ ಜಾಹಿರಾತಿನ ಆಮಿಷಕ್ಕೆ ಒಳಗಾದ ವ್ಯಕ್ತಿಯೋರ್ವ 3.89 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿರುವ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.
ಉಡುಪಿಯಲ್ಲಿರುವ ಐಸಿಐಸಿಐ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿರುವ ವ್ಯಕ್ತಿಯೋರ್ವ ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ.
ಫೇಸ್ಬುಕ್ ನಲ್ಲಿ ಪದೇಪದೇ ಪ್ರಸಿದ್ಧ ವ್ಯಕ್ತಿಗಳ ಹೆಸರನ್ನು ಬಳಸಿಕೊಂಡು ಕೇವಲ 20 ಸಾವಿರದಿಂದ 25 ಸಾವಿರದ ವರೆಗೆ ಹೂಡಿಕೆ ಮಾಡಿದರೆ ಅಧಿಕ ಆದಾಯ ಗಳಿಸಬಹುದು ಎಂಬ ಜಾಹಿರಾತು ಪ್ರಕಟಿಸುತ್ತಿದ್ದು. ಅಲ್ಲದೆ ನೀವು ಅದೃಷ್ಟವಂತರಾಗಿದ್ದರೆ ಮಾತ್ರ ಇಂದು ವಿಶೇಷ ಗುಂಪಿಗೆ ಸೇರುವ ಅವಕಾಶ ಇದೆ ಎಂದು ಕೊನೆಯ ದಿನ ಎಂಬ ಸಂದೇಶದ ಮೂಲಕ ತುರ್ತು ನಿರ್ಧಾರ ತೆಗೆದುಕೊಳ್ಳುವಂತೆ ಪ್ರೇರೇಪಿಸಲಾಗಿತ್ತು. ಈ ಆಮಿಷಕ್ಕೆ ಒಳಗಾದ ದೂರುದಾರ 2026ರ ಜೂ. 8ರಂದು ಇದಕ್ಕೆ ಸಂಬಂಧಿಸಿದ ಗ್ರೂಪ್ ಸೇರಿದ್ದು ಬಳಿಕ ವಂಚಕರು ವಿವಿದ ನೆಪಗಳನ್ನು ಹೇಳಿ ಹಂತ ಹಂತವಾಗಿ ಹಣ ಪಾವತಿಸುವಂತೆ ಹೇಳಿದ್ದರು. ಅದಕ್ಕಾಗಿ ದೂರುದಾರ ವಂಚಕರ ಖಾತೆಗೆ ಒಟ್ಟು ₹3,89,387.70 ಹಣವನ್ನು ವರ್ಗಾಯಿಸಿದ್ದರು. ಕೊನೆಗೆ ಇದರಿಂದ ಮೋಸ ಹೋಗಿರುವುದು ಅರಿವು ಆದ ಮೇಲೆ ದೂರುದಾರ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅದರ ಆಧಾರದ ಮೇಲೆ ಅಪರಾಧ ಸಂಖ್ಯೆ 94/2026ರಲ್ಲಿ ಪ್ರಕರಣ ದಾಖಲಾಗಿದೆ.