ಡೈಲಿವಾರ್ತೆ: 26/ಜು./2026

ಧಗಧಗನೆ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು; ಚಂದಾಪುರದಲ್ಲಿ ಆತಂಕ ಸೃಷ್ಟಿಸಿದ ಅಗ್ನಿ ಅವಘಡ

ಬೆಂಗಳೂರು: ಪಾರ್ಕಿಂಗ್‌ ಲಾಟ್‌ನಲ್ಲಿ ನಿಲ್ಲಿಸಿದ್ದ ನಾಲ್ಕು ಖಾಸಗಿ ಬಸ್‌ಗಳಿಗೆ ಬೆಂಕಿ ಬಿದ್ದಿದ್ದು, ಸುಟ್ಟು ಕರಕಲಾಗಿವೆ. ಆನೇಕಲ್ ತಾಲೂಕಿನ ಹಳೆ ಚಂದಾಪುರದಲ್ಲಿ ಘಟನೆ ನಡೆದಿದೆ.

ಏಕಾಏಕಿ ಒಂದು ಬಸ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಅಕ್ಕಪಕ್ಕದಲ್ಲಿದ್ದ ಬಸ್‌ಗಳಿಗೂ ಬೆಂಕಿ ತಗುಲಿದೆ. ಹೀಗೆ ಧಗಧಗೆನೆ ಹೊತ್ತಿ ಉರಿದ ನಾಲ್ಕು ಬಸ್‌ಗಳು ಬೆಂಕಿಗೆ ಆಹುತಿಯಾಗಿವೆ.

ಸದ್ಯ ಬಸ್‌ಗಳ ಮಾಲೀಕರ ವಿವರ ಪತ್ತೆಯಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ತಂಡ ದೌಡಾಯಿಸಿದೆ. ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.