ಡೈಲಿವಾರ್ತೆ:24/ಸೆ./2026

ಪಾಣೆಮಂಗಳೂರು-ನೆಹರುನಗರ ಎಸ್ಕೆಎಸ್ಸೆಸ್ಸೆಫ್ ಶಾಖೆಯ ನೂತನ ಅಧ್ಯಕ್ಷರಾಗಿ ಪಿ.ಎಸ್. ಅಬ್ದುಲ್ ಲತೀಫ್ ಆಯ್ಕೆ

ಬಂಟ್ವಾಳ : ಪಾಣೆಮಂಗಳೂರು – ನೆಹರುನಗರ ಎಸ್ಕೆಎಸ್ಸೆಸ್ಸೆಫ್ ಶಾಖೆಯ ನೂತನ ಅಧ್ಯಕ್ಷರಾಗಿ ಪಿ.ಎಸ್. ಅಬ್ದುಲ್ ಲತೀಫ್ ಆಯ್ಕೆಯಾಗಿದ್ದಾರೆ.

ನೆಹರುನಗರ ಅಲ್ ಬದ್ರಿಯಾ ಮದ್ರಸ ಸಭಾಂಗಣದಲ್ಲಿ
ನಡೆದ 2026-2029ನೇ ಸಾಲಿನ ನೂತನ ಸಮಿತಿ ರಚನಾ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.

ಉಪಾಧ್ಯಕ್ಷರುಗಳಾಗಿ ಮಹಮ್ಮದ್ ಮೇಸ್ತ್ರಿ, ಅಬ್ದುಲ್ ರಹಿಮಾನ್ ಕೀಳಂಗಡಿ ಹಾಗೂ ಮುಬಾರಕ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಬಶೀರ್, ಕೋಶಾಧಿಕಾರಿಯಾಗಿ ಮಹಮ್ಮದ್ ರಮೀಝ್, ಜೊತೆ ಕಾರ್ಯದರ್ಶಿಗಳಾಗಿ ಮಹಮ್ಮದ್ ರಿಝ್ವಾನ್, ಮಹಮ್ಮದ್ ಕಾಮಿಲ್, ಅಫ್ರಾಝ್ ಹಾಗೂ ಸುಹೈಲ್ ಅವರು ಆಯ್ಕೆಯಾದರು.

ನೆಹರುನಗರ ಬದ್ರಿಯಾ ಜುಮಾ ಮಸೀದಿ ಖತೀಬ್ ದಾವೂದ್ ಇಸ್ಮಾಯಿಲ್ ಫೈಝಿ ದುಆ ನೆರವೇರಿಸಿ, ನೂತನ ಸಮಿತಿಯು ಸಂಘಟನೆಯ ಆಶಯ ಹಾಗೂ ಧ್ಯೇಯಗಳನ್ನು ಮುಂದುವರಿಸಿಕೊಂಡು, ಯುವ ಸಮುದಾಯದ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವಂತಾಗಬೇಕು ಎಂದು ಸಲಹೆ ನೀಡಿದರು. ಅನ್ವರ್ ಅರ್ಲೂರಿ ಸ್ವಾಗತಿಸಿದರು.