ಡೈಲಿವಾರ್ತೆ:29/ಸೆ./2026

ಇಂದು ಕಿಲ್ಲೂರಿನಲ್ಲಿ ಗ್ರ್ಯಾಂಡ್ ಹುಬ್ಬುರ್ರಸೂಲ್ ಕಾನ್ಫರೆನ್ಸ್: ಪೇರೋಡ್ ಉಸ್ತಾದ್ ಆಗಮನ

ಬೆಳ್ತಂಗಡಿ: ಸೆ.29: SMA ಮುರ ರೀಜಿನಲ್ ಹಾಗೂ SJM ಮುರ ರೇಂಜ್ ವತಿಯಿಂದ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಹಾಗೂ ಅಗಲಿದ ನೇತಾರರ ಅನುಸ್ಮರಣಾ ಕಾರ್ಯಕ್ರಮ ಇಂದು (ಸೆ.29) ಮಗ್ರಿಬ್ ನಮಾಝಿನ ಬಳಿಕ ಕಿಲ್ಲೂರಿನ ಎಂ.ಜೆ.ಎಂ ಮಸ್ಜಿದ್ ವಠಾರದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಶೈಖುನಾ ಪೇರೋಡ್ ಉಸ್ತಾದ್ ಅವರು ಆಗಮಿಸಿ ಧಾರ್ಮಿಕ ಸಂದೇಶ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಧಾರ್ಮಿಕ ಮುಖಂಡರು ಹಾಗೂ ಸಂಘಟನೆಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

Grand Hubburrasool Conference ಅಂಗವಾಗಿ ನಡೆಯಲಿರುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.