




ಡೈಲಿವಾರ್ತೆ:24/ಅ./2026

ಕೋಟ ಅಮೃತೇಶ್ವರಿ ದೇಗುಲ, ಜಾಮಿಯಾ ಮಸ್ಜಿದ್ಗೆ ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮ್ಮದ್ ಭೇಟಿ

ಕೋಟ: ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮ್ಮದ್ ಅವರು ಶನಿವಾರ ಸಂಜೆ ಕೋಟದ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲ ಹಾಗೂ ಕೋಟ ಜಾಮಿಯಾ ಮಸ್ಜಿದ್ಗೆ ಭೇಟಿ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್, ಉಡುಪಿ ಹಾಗೂ ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಗಿದ್ದ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು, ಬಳಿಕ ಕೋಟದ ಅಮೃತೇಶ್ವರಿ ದೇಗುಲಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ. ಕುಂದರ್ ಅವರು ಸಭಾಪತಿ ಸಲೀಂ ಅಹಮ್ಮದ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಿದರು. ಶಾಲು ಹೊದಿಸಿ ಸನ್ಮಾನಿಸಿದ ಬಳಿಕ ಪ್ರಸಾದ ವಿತರಿಸಿದರು.


ದೇಗುಲದ ಪ್ರಧಾನ ಅರ್ಚಕ ಸುಬ್ರಾಯ ಜೋಗಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗಣೇಶ್ ಕೆ. ನೆಲ್ಲಿಬೆಟ್ಟು, ಶಿವ ಪೂಜಾರಿ, ಸುಭಾಸ್ ಶೆಟ್ಟಿ ಗಿಳಿಯಾರು ಹಾಗೂ ಸುಬ್ರಾಯ ಆಚಾರ್, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಜಿತ್ ಶೆಟ್ಟಿ ಯಾಳಕ್ಲು ಮತ್ತು ಕೋಟ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮೇಶ್ ಮೆಂಡನ್ ಉಪಸ್ಥಿತರಿದ್ದರು.
ಕೋಟ ಜಾಮಿಯಾ ಮಸ್ಜಿದ್ಗೆ ಭೇಟಿ:

ಅಮೃತೇಶ್ವರಿ ದೇಗುಲದ ಭೇಟಿಯ ಬಳಿಕ ಸಲೀಂ ಅಹಮ್ಮದ್ ಅವರು ಕೋಟ ಜಾಮಿಯಾ ಮಸ್ಜಿದ್ಗೆ ತೆರಳಿದರು.

ಈ ಸಂದರ್ಭದಲ್ಲಿ ಮಸ್ಜಿದ್ ಆಡಳಿತ ಮಂಡಳಿ ಸದಸ್ಯರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಮಸೀದಿಯ ಮೌಲಾನ ಸಮಿ ಹ್ರೂರಹಮಾನ್ ಅವರ ದುವಾದೊಂದಿಗೆ ಸಭಾಪತಿ ಅವರನ್ನು ಗೌರವಿಸಲಾಯಿತು. ಈ ವೇಳೆ ಮಸೀದಿಯ ಆಡಳಿತ ಮಂಡಳಿ ಉಪಾಧ್ಯಕ್ಷ ವಾಹಿದ್ ಆಲಿ, ಕಾರ್ಯದರ್ಶಿ ಬಶೀರ್, ಸಿರಾಜ್ ಬಾರಿಕೆರೆ, ಮೌಲಾನ ಸಮಿ ಹ್ರೂರಹಮಾನ್, ಕೋಟ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಮೊಹಮ್ಮದ್ ಯಾಸಿನ್ ಸೇರಿದಂತೆ ಜಮಾತ್ನ ಸದಸ್ಯರು ಉಪಸ್ಥಿತರಿದ್ದರು.