ಡೈಲಿ ವಾರ್ತೆ:10 ಫೆಬ್ರವರಿ 2023

ಚಿತ್ತಾರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ವಿಜ್ಞಾಪನಾ ಪತ್ರ ಬಿಡುಗಡೆ

ಈ ದೇವಾಲಯವು ಸುಮಾರು 700 ವರ್ಷಗಳ ಇತಿಹಾಸವಿದ್ದೂ ಇದೀಗ ದೇವಳ ಸಂಪೂರ್ಣವಾಗಿ ಶಿಥಲಗೊಂಡಿದೆ. ಸುಮಾರು 1 ಕೋಟಿ 12 ಲಕ್ಷದ ವೆಚ್ಚದಲ್ಲಿ ನೂತನ ಶಿಲಾಮಯ ದೇಗುಲವನ್ನು ನಿಮಾ೯ಣ ಮಾಡಲು ನಂಬಿದ ಭಕ್ತರು ಹಾಗೂ ದಾನಿಗಳು ಮುಂದಾಗಿದ್ದಾರೆ. ಇದರಂತೆ ದೇವಳದ ಜೀಣೋ೯ದ್ಧಾರಕ್ಕೆ ಚಾಲನೆ ನೀಡಿದ್ದು ಶೀಘ್ರವಾಗಿ ದೇವಾಲಯದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಭಕ್ತರು ಸಹಕರಿಸಬೇಕು ಎಂದು ಹಳ್ಳಾಡಿ-ಹಕಾ೯ಡಿ ಗ್ರಾಮದ ಚಿತ್ತಾರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮಕೃಷ್ಣ ಉಡುಪ ಹೇಳಿದರು.

ಹಳ್ಳಾಡಿ-ಹಕಾ೯ಡಿ ಗ್ರಾಮದ ಚಿತ್ತಾರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ದೇಗುಲದ ಜೀಣೋ೯ದ್ಧಾರ ಕಾಮಗಾರಿಯ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ದೇವಳದ ಜೀಣೋ೯ದ್ಧಾರ ಸಮಿತಿಯ ಪ್ರಮುಖರಾದ ವೇದಮೂತಿ೯ ಸುದರ್ಶನ ಉಡುಪ, ಈಶ್ವರ ಉಡುಪ, ವಿಠಲ ಶೆಟ್ಟಿ ಅಲ್ತೂರು, ಜಯಪ್ರಕಾಶ್ ಶೆಟ್ಟಿ ಚಿಟ್ಟೆಬೈಲು, ಗಣಪಯ್ಯ ಶೆಟ್ಟಿ ಹಕಾ೯ಡಿ ಪಟೇಲರ ಮನೆ, ಪ್ರಕಾಶ್ ಶೆಟ್ಟಿ ಹಕಾ೯ಡಿ ಪಟೇಲರ ಮನೆ, ಅಶ್ವಿನ್ ಗಾವಳಿ ಅಂಪಾರು ಮನೆ, ಪ್ರಕಾಶ್ ಶೆಟ್ಟಿ ಹಕಾ೯ಡಿ ಹೊಸಮನೆ, ಉಮೇಶ್ ಆಚಾರ್ಯ ಹಕಾ೯ಡಿ, ಅರುಣ ಆಚಾರ್ಯ ಹಕಾ೯ಡಿ, ನಾಗರಾಜ ಶೆಟ್ಟಿ ಹಕಾ೯ಡಿ, ಮತ್ತಿತರರು ಉಪಸ್ಥಿತರಿದ್ದರು.