



ಡೈಲಿ ವಾರ್ತೆ:13 ಫೆಬ್ರವರಿ 2023


ಗದಗ: ಆಟೋ ರಿಕ್ಷಾ ಹಾಗೂ ಖಾಸಗಿ ಬಸ್ ಡಿಕ್ಕಿಯಾಗಿ ಮೂವರ ಸಾವು, 8 ಮಂದಿಗೆ ಗಾಯ
ಗದಗ: ಆಟೋ ಹಾಗೂ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟು, 8 ಮಂದಿ ಗಾಯಗೊಂಡಿರುವ ಘಟನೆ ಗದಗದ ರೋಣ ರಸ್ತೆಯ ದಂಡಿನ ದುರ್ಗಮ್ಮ ದೇವಸ್ಥಾನದ ಬಳಿ ಭಾನುವಾರ ನಡೆದಿದೆ.
ಅಪಘಾತದಲ್ಲಿ ಆಟೋದಲ್ಲಿದ್ದ ನರಸಾಪುರ ಆಶ್ರಯಕಾಲೋನಿ ನಿವಾಸಿ ಸೈಯದ್ ಹುಸೇನಸಾಬ ಸೂಡಿ(20), ನರಸಾಪುರದ ಪ್ರದೀಪ ದೇವಪ್ಪ ಪೂಜಾರ (40), ಬೆಟಗೇರಿಯ ನಿಖಿಲ ಮಂಜುನಾಥ ಮುಳಗುಂದ (20) ಎಂಬುವವರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗದಗದ ಬೆಟಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ರಭಸಕ್ಕೆ ಬಸ್ ಹಾಗೂ ಆಟೋ ಪಲ್ಟಿಯಾಗಿ ನಜ್ಜುಗುಜ್ಜಾಗಿವೆ.