ಡೈಲಿ ವಾರ್ತೆ:19 ಫೆಬ್ರವರಿ 2023

ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಡಿ ಕನ್ಯಾಣ ಶಾಖೆ
ನೂತನ ಕಟ್ಟಡ ಲೋಕಾರ್ಪಣೆ!

ಸಹಕಾರಿ ಸಂಘಗಳೇ ಜನಸಾಮಾನ್ಯರ ಸ್ನೇಹಿ:ಡಾ.ಎಂ.ಎನ್ ರಾಜೇಂದ್ರ ಕುಮಾರ್

ಕೋಟ: ಕೋಟ ಸಹಕಾರಿ ಸಂಘ ಅಭಿವೃದ್ಧಿ ಪಥದಲ್ಲಿ
ಮುನ್ನುಗ್ಗುತ್ತಿದೆ. ಪ್ರಸ್ತುತ ಕಾಲ ಘಟ್ಟದಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಿಗಿಂತ ಸಹಕಾರಿ ಸಂಘಗಳೇ ಜನಸಾಮಾನ್ಯರ ಸ್ನೇಹಿಯಾಗಿ ಜನೋಪಯೋಗಿ ಕೇಂದ್ರವಾಗಿ ರೂಪುಗೊಂಡಿದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಸಂಘದ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದರು.
ಅವರು ಭಾನುವಾರ ಕೋಟ ಸಹಕಾರಿ ವ್ಯವಸಾಯಕ
ಸಂಘದ ಕೋಡಿ ಕನ್ಯಾಣ ಶಾಖೆಯ ನೂತನ ಶಾಖಾ
ಕಟ್ಟಡ, ಗೋದಾಮು, ವಸತಿ ಸಂಕೀರ್ಣ ಹಾಗೂ ಶಾಖೆಯ
ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳು ಬ್ಯಾಂಕ್‍ಗಳ
ತವರೂರೆನಿಸಿದೆ. ಆದರೆ ರಾಷ್ಟ್ರೀಕೃತ ಬ್ಯಾಂಕ್‍ಗಳ
ಸಿಬ್ಬಂದಿಗಳಿಗೆ ಸ್ಥಳೀಯ ಆಡುಭಾಷೆ ಬಾರದೆ ಜನ
ಸಾಮಾನ್ಯರಿಗೆ ಸಂಕಷ್ಟವನ್ನು ತಂದಿರಿಸಿದೆ. ಬ್ಯಾಂಕ್‍ಗಳ
ವಿಲೀನದಿಂದ ಅಲ್ಲಿನ ಗುಣಮಟ್ಟ ಕುಸಿದಿದೆ ಎಂದರಲ್ಲದೆ, ಸಹಕಾರಿ ಕ್ಷೇತ್ರ ಇಂದು ಎಲ್ಲಾ ಕ್ಷೇತ್ರದಲ್ಲೂ
ಮುಂಚೂಣಿಗೆ ನಿಂತಿದೆ. ಕೃಷಿಕರ ಜೀವಾಳವಾಗಿ ಹಲವಾರು
ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದರು.
ಭದ್ರತಾ ತಿಜೋರಿಯನ್ನು ರಾಜ್ಯದ ಹಿಂದುಳಿದ
ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಿ ಮಾತನಾಡಿದರು.



ಇದೇ ಸಂದರ್ಭದಲ್ಲಿ ಸಹಕಾರ ಕ್ಷೇತ್ರದ ಸಾಧನೆಗಾಗಿ ಡಾ.ಎಂ.ಎನ್ ರಾಜೇಂದ್ರಕುಮಾರ್ ಹಾಗೂ ರಾಜ್ಯ ಆಹಾರ ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ನಿವೃತ್ತ ಯೋಧರಾದ ಗಣೇಶ್ ಅಡಿಗ, ವಿನೋದ್ ಕುಮಾರ್, ಕೋಡಿ ಶಾಖೆಯ ಆರಂಭಿಕ ಕಾಲಘಟ್ಟದಲ್ಲಿ ಸಹಕಾರವಿತ್ತ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶಂಕರ್ ಎ. ಕುಂದರ್, ಮಾಜಿ ಪಂಚಾಯಿತಿ ಸದಸ್ಯ ಲಕ್ಷ್ಮಣ್ ಸುವರ್ಣ, ಸಂಘದ ಮಾಜಿ ನಿರ್ದೇಶಕ ವಾಮನ್ ಸಾಲಿಯಾನ್, ಶಾಖಾ ಸಭಾಪತಿ ಡಾ.ಕೃಷ್ಣ ಕಾಂಚನ್, ಕಟ್ಟಡ ಗುತ್ತಿಗೆದಾರ ಪ್ರಮೋದ್ ಶೆಟ್ಟಿ, ಇಂಜಿನಿಯರ್ ಚೇತನ್, ಸಂಘದ ಕಟ್ಟಡ ಸ್ಥಳಕ್ಕೆ ಸಹಕಾರವಿತ್ತ ರಾಜೇಶ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನೂತನ ಕಟ್ಟಡ, ಗೋದಾಮು, ಭದ್ರತಾ ಕೊಠಡಿ, ವಸತಿ ಸಂಕೀರ್ಣವನ್ನು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.
ಸುತ್ತುನಿಧಿಯನ್ನು ರಾಜ್ಯ ಆಹಾರ ಮತ್ತು ನಾಗರಿಕ
ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ
ವಿತರಿಸಿದರು. ಗಣಕಯಂತ್ರವನ್ನು ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ಕುಂದಾಪುರ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಚಾಲನೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೋಡಿ ಕನ್ಯಾನ ಗ್ರಾಮ ಪಂಚಾಯಿತಿ
ಅಧ್ಯಕ್ಷ ಕೆ.ಪ್ರಭಾಕರ್ ಮೆಂಡನ್, ಶ್ರೀದೇವಿ ಮಾರಿಕಾಂಬ
ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಕೆ.,
ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ
ಶಂಭು ಪೂಜಾರಿ,ಕೋಡಿ ಮೀನುಗಾರಿಕಾ ಪ್ರಾಥಮಿಕ
ಸಹಕಾರ ಸಂಘದ ಅಧ್ಯಕ್ಷ ಅಶೋಕ್ ತಿಂಗಳಾಯ,
ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ
ಕೊರಗ ಪೂಜಾರಿ, ಎಸ್‍ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರಾಜಾರಾಮ್ ಶೆಟ್ಟಿ ಮೊದಲಾದವರು ಆಗಮಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಜಿ.ರಾಜೀವ ದೇವಾಡಿಗ,
ನಿರ್ದೇಶಕರುಗಳಾದ ಟಿ.ಮಂಜುನಾಥ್ ಗಿಳಿಯಾರು,
ಮಹೇಶ್ ಶೆಟ್ಟಿ, ರಂಜೀತ್ ಕುಮಾರ್, ಉದಯ್ ಕುಮಾರ್
ಶೆಟ್ಟಿ, ನಾಗರಾಜ್ ಹಂದೆ, ರಾಜೇಶ್ ಉಪಾಧ್ಯ, ರವೀಂದ್ರ
ಕಾಮತ್, ಗೀತಾ ಶಂಭು ಪೂಜಾರಿ, ಪ್ರೇಮಾ, ರಶ್ಮೀತಾ,
ಶ್ರೀಕಾಂತ್ ಶೆಣೈ, ಭಾಸ್ಕರ್ ಶೆಟ್ಟಿ, ಕಾರ್ಕಡ ಅಚ್ಯುತ್ ಪೂಜಾರಿ,
ಸಂಘದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ
ಶೆಟ್ಟಿ ಉಪಸ್ಥಿತರಿದ್ದರು.

ಶಾಖಾ ಸಭಾಪತಿ ಡಾ.ಕೃಷ್ಣ ಕಾಂಚನ್ ಸ್ವಾಗತಿಸಿದರು. ಸಿಬ್ಬಂದಿ
ಶಾಲಿನಿ ಹಂದೆ ಸನ್ಮಾನಪತ್ರ ವಾಚಿಸಿದರು. ಸಹಕಾರಿ ಸಂಘದ
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ
ವರದಿ ವಾಚಿಸಿ, ವಂದಿಸಿದರು.ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ
ನಿರೂಪಿಸಿದರು.