ಡೈಲಿ ವಾರ್ತೆ:23 ಫೆಬ್ರವರಿ 2023

ಮುಸ್ಲಿಂ ದಂಪತಿಗೆ ರಾಜ್ಯದಲ್ಲಿ ವಕ್ಫ್ ಮಂಡಳಿಯಿಂದ ಸಿಗಲಿದೆ ವಿವಾಹ ಪ್ರಮಾಣ ಪತ್ರ:

ವಕ್ಫ್‌ ಸಲಹಾ‌ ಸಮಿತಿ ಅಧ್ಯಕ್ಷ ಸಿ. ಎಚ್. ಅಬ್ದುಲ್ ಮುತ್ತಲಿ ವಂಡ್ಸೆ

ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಮಂಡಳಿಯಿಂದ ಮುಸ್ಲಿಮ್ ದಂಪತಿಗೆ ವಿವಾಹ ಪ್ರಮಾಣ ಪತ್ರ ದೊರೆಯಲಿದೆ.

ವಿಕಾಸ ಸೌಧದಲ್ಲಿ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅಧ್ಯಕ್ಷತೆಯಲ್ಲಿ ನಡೆದ ವಕ್ಫ್ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಮೊದಲು ವಕ್ಫ್‌ನಿಂದ ನೀಡಲಾಗುತ್ತಿದ್ದ ವಿವಾಹ ಪ್ರಮಾಣ ಪತ್ರಕ್ಕೆ ಸಂಬಂಧಿಸಿ ಹೈದರಾಬಾದ್ ಕರ್ನಾಟಕದ ಖಾಝಿ ಮುಹಮ್ಮದ್ ಹುಸೈನ್ ಸಿದ್ದೀಖಿ ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ಪ್ರಶ್ನಿಸಿದ್ದರು.

ಈ ಹಿನ್ನೆಲೆಯಲ್ಲಿ ವಕ್ಫ್‌ನಿಂದ ವಿವಾಹ ಪ್ರಮಾಣ ಪತ್ರ ನೀಡುವುದಕ್ಕೆ ತಡೆ ಉಂಟಾಗಿತ್ತು. ಈ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಸರಕಾರಕ್ಕೆ ಸೂಚಿಸಲಾಗಿತ್ತು.

ರಾಜ್ಯ ವಕ್ಪ್ ಮಂಡಳಿಯ ಪರಿಶ್ರಮದಿಂದ ಸರಕಾರದ ಅಧೀನ ಕಾರ್ಯದರ್ಶಿ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಬೆಂಗಳೂರು ಇವರ ಆದೇಶದ ಮೇರೆಗೆ ಇನ್ನು ಮುಂದೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಚೇರಿಯಲ್ಲಿ ನೀಡಲಾಗುತ್ತದೆ ಎಂದು ಉಡುಪಿ ಜಿಲ್ಲಾ ವಕ್ಫ್‌ ಸಲಹಾ‌ ಸಮಿತಿ ಅಧ್ಯಕ್ಷ ಸಿ. ಎಚ್. ಅಬ್ದುಲ್ ಮುತ್ತಲಿ ವಂಡ್ಸೆ ಪ್ರಕಟಿಸಿದ್ದಾರೆ.


ಅಧ್ಯಕ್ಷರು
ಹಾಗೂ ಸರ್ವ ಸದಸ್ಯರು
ಜಿಲ್ಲಾ ವಕ್ಫ್‌ ಸಲಹಾ‌ ಸಮಿತಿ ಉಡುಪಿ ಜಿಲ್ಲೆ