



ಡೈಲಿ ವಾರ್ತೆ:23 ಫೆಬ್ರವರಿ 2023


ಎಸ್.ಡಿ.ಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಿ. ಎನ್ ಶರ್ಮಾ ಹೃದಯಾಘಾತದಿಂದ ನಿಧನ
ಉಡುಪಿ : ಉದ್ಯಾವರದ ಎಸ್ ಡಿ ಎಮ್ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಡಿ.ಎನ್ ಶರ್ಮಾ ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
69 ವರ್ಷದ ಅವರು ಬೆಂಗಳೂರಿನ ಮಗಳ ಮನೆಯಲ್ಲಿ ಕಳೆದ ರಾತ್ರಿ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು, ನಾಲ್ಕು ಸಹೋದರ ಹಾಗೂ ಏಳು ಸಹೋದರಿಯರನ್ನು ಅಗಲಿದ್ದಾರೆ.
ಡಿ.ಎನ್ ಶರ್ಮಾ ಅವರು ಕಾಸರಗೋಡು ಕುಂಬಳೆಯ ನಿರ್ಚಾಲು ದೇವಾಸ್ಯ ಮನೆತನದ ದಿ.ಮಹಾಬಲ ಭಟ್ ಮತ್ತು ದೇವಕಿ ಅವರ ದ್ವಿತೀಯ ಪುತ್ರರಾಗಿದ್ದಾರೆ. ಇವರು ಎಸ್.ಡಿ.ಎಂ ಫಾರ್ಮಸಿಯ ಪೂಗ ಸಿರಪ್ ಮತ್ತು ಪೂಗ ಟ್ರಿಮ್ ಉತ್ಪನ್ನಗಳನ್ನು ಕಂಡು ಹಿಡಿದ ಕೀರ್ತಿ ಇವರದ್ದಾಗಿದೆ.