ಡೈಲಿ ವಾರ್ತೆ:03 ಮಾರ್ಚ್ 2023
ಬಿಜೆಪಿ ಶಾಸಕನ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ: 6 ಕೋಟಿ ರೂ. ಸೀಜ್
ಬೆಂಗಳೂರು: ಬಿಜೆಪಿ ಶಾಸಕ ವಿರೂಪಾಕ್ಷಪ್ಪಅವರ ಪುತ್ರನ
ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು ಇದುವರೆಗೆ ಪ್ರಶಾಂತ್ ಮಾಡಾಳ್ ಮನೆಯಿಂದ ಬರೋಬ್ಬರಿ 6 ಕೋಟಿ ಹಣವನ್ನು ಸೀಜ್ ಮಾಡಲಾಗಿದೆ.
ಗುರುವಾರ ರಾತ್ರಿಯಿಂದಲೇ ಪ್ರಶಾಂತ್ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ತಲಾಶ್ ನಡೆಸುತ್ತಿದ್ದಾರೆ. ಈ ವೇಳೆ ಅಧಿಕಾರಿಗಳು ಬರೋಬ್ಬರಿ 6 ಕೋಟಿ ಬೇಟೆಯಾಡಿದ್ದು, ಪ್ರಶಾಂತ್ ಮಾಡಾಳ್ ಮನೆ ಕಚೇರಿಯಲ್ಲಿ ಸಿಕ್ಕ ಹಣ ಯಾರದ್ದು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ಈಗಾಗಲೇ ಪ್ರಶಾಂತ್ ಸೇರಿ ಐವರನ್ನು ಬಂಧಿಸಲಾಗಿದ್ದು, ಇವರ ಬಳಿ ಹಣದ ಮೂಲದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಪ್ರಶಾಂತ್ ಮಾಡಾಳ್ ಈ ಬಗ್ಗೆ ಏನನ್ನೂ ಬಾಯ್ದಿಡುತ್ತಿಲ್ಲ. ಎನ್ನಲಾಗಿದೆ.
ಇನ್ನು ಕ್ರೆಸೆಂಟ್ ರಸ್ತೆಯ ಕಚೇರಿ ಹಾಗೂ ಸಂಜಯನಗರದ ಮನೆಯಲ್ಲಿಯೂ ಹಣ ಪತ್ತೆಯಾಗಿದೆ. ಕೆಎಸ್ಬಿಎಲ್ ಎಂಡಿ ಮನೆಯ ಮೇಲೆ ಕೂಡ ದಾಳಿ ಮಾಡಿರುವ ಲೋಕಾ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಸದ್ಯ ಪ್ರಶಾಂತ್ ಮಾಡಾಳ್ ಅರೆಸ್ಟ್ ನಿಂದ ಅಪ್ಪನಿಗೆ ಕಂಟಕ ಸಾಧ್ಯತೆ ಇದೆ. ಈ ಸಂಬಂಧ ವಿರೂಪಾಕ್ಷಪ್ಪ ಮಾಡಾಳ್ ಗೂ ತನಿಖೆ ಬಿಸಿ ತಟ್ಟಿದ್ದು, ನೋಟಿಸ್ ಕೊಟ್ಟು ಶಾಸಕರನ್ನು ವಿಚಾರಣೆಗೆ ಕರೆಯುವ ಸಾಧ್ಯತೆಗಳಿವೆ.