ಡೈಲಿ ವಾರ್ತೆ:03 ಮಾರ್ಚ್ 2023
ಇರುವೆಗೆ ಸಿಂಪಡಿಸುವ ವಿಷ ತಿಂದು ಬಾಲಕ ಸಾವು
ಕೊಳ್ಳೇಗಾಲ: ಇರುವೆಗೆ ಸಿಂಪಡಿಸುವ ಇರುವೆ ನಾಶಕ ತಿಂದು 5 ವರ್ಷದ ಬಾಲಕ ಅಸುನೀಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಪುಟ್ಟಿರಮ್ಮನ ದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕ್ಯಾತೆ ಗೌಡ ಎಂಬುವರ 5 ವರ್ಷದ ಮಗ ಶಿವು ಸಾವನ್ನಪ್ಪಿದ ಬಾಲಕ. ಕ್ಯಾತೆಗೌಡ ತಮ್ಮ ಮನೆಯ ಹಿತ್ತಲಿನ ಕಿಟಕಿಯಲ್ಲಿ ಇರುವೆ ಗೆ ಸಿಂಪಡಿಸುವ ಔಷಧಿಯನ್ನು ತಂದಿಟ್ಟಿದ್ದರು. ಮಗು ಆ ಆಟವಾಡುವ ಸಮಯದಲ್ಲಿ ಇರುವೆ ಪುಡಿಯನ್ನು ತಿಂದು ಅಸ್ವಸ್ಥಗೊಂಡಿದೆ.
ಇದನ್ನು ಗಮನಿಸಿದ ಪೋಷಕರು ತಕ್ಷಣ ಕಾಮಗೆರೆ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಮಗು ಚಿಕಿತ್ಸೆಗೆ ಫಲಿಸದೆ ಗುರುವಾರ ರಾತ್ರಿ ಸಾವನ್ನಪ್ಪಿದೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.