ಡೈಲಿ ವಾರ್ತೆ:04 ಮಾರ್ಚ್ 2023

💢ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಶಾಲೆಗಳಿಗೆ ಪಂಚಾಯತ್ ವತಿಯಿಂದ ಕ್ರೀಡಾಪರಿಕರಗಳ ವಿತರಣೆ 💢

ಕೋಟ: ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಉತ್ತಮ ಗುಣಮಟ್ಟದ ಕ್ರೀಡಾಪರಿಕರಗಳನ್ನು ಪಂಚಾಯತ್ ವತಿಯಿಂದ ಮಾ. 3 ರಂದು ಶುಕ್ರವಾರ ವಿತರಿಸಲಾಯಿತು.

ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಸಭೆಯನ್ನುದ್ದೇಶಿಸಿ ಮಾತನಾಡಿ ಮಕ್ಕಳು ಪಠ್ಯ ಚಟುವಟಿಕೆಗಳಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿ ಹಾಗೂ ಕ್ರೀಡಾ ಚಟುವಟಿಕೆಗಳಲ್ಲೂ ತಾವು ತೊಡಗಿಸಿಕೊಂಡು ಕಲಿತ ಶಾಲೆಗಳಿಗೆ ಒಳ್ಳೆಯ ಹೆಸರುಗಳನ್ನು ತಂದುಕೊಡುವುದಲ್ಲದೇ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ ಅಜಿತ್ ದೇವಾಡಿಗ, ನ್ಯಾಯ ಸಮಿತಿ ಅಧ್ಯಕ್ಷರಾದ ಶ್ರೀ ಶೇಖರ್ ಜಿ, ಸದಸ್ಯರಾದ ಸಂತೋಷ್ ಪ್ರಭು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಕಾರ್ಯಕ್ರಮವನ್ನು ನಿರೂಪಿಸಿದರು.
ಸದಸ್ಯರಾದ ಚಂದ್ರ ಪೂಜಾರಿ ವಂದಿಸಿದರು.