ಸಾಂದರ್ಭಿಕ ಚಿತ್ರ

ಡೈಲಿ ವಾರ್ತೆ:16 ಮಾರ್ಚ್ 2023

ಶಿರೂರು ಚೆಕ್‌ಪೋಸ್ಟ್ ಬಳಿ ಕಾರಿನಲ್ಲಿ ದಾಖಲೆ ಇಲ್ಲದ 20 ಲಕ್ಷ ರೂ.ಪತ್ತೆ

ಕುಂದಾಪುರ: ಬೈಂದೂರು ತಾಲೂಕು ಶಿರೂರು ಚೆಕ್‌ಪೋಸ್ಟ್ ಬಳಿ ವಾಹನಗಳ ತಪಾಸಣೆ ವೇಳೆ ಭಟ್ಕಳದ ಕಡೆಯಿಂದ ಬರುತಿದ್ದ ಕಾರೊಂದರಲ್ಲಿ ಯಾವುದೇ ದಾಖಲೆಗಳಿಲ್ಲದ 20 ಲಕ್ಷ ರೂ.ಗಳು ಪತ್ತೆಯಾಗಿದ್ದು, ಬೈಂದೂರು ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ.

ಅಪರಾಹ್ನ 2 ಗಂಟೆ ಸುಮಾರಿಗೆ ಭಟ್ಕಳ ಕಡೆಯಿಂದ ಬಂದ ಕಾರನ್ನು ಮಾಮೂಲಿನಂತೆ ತಪಾಸಣೆ ನಡೆಸುತಿದ್ದಾಗ, ಅದರಲ್ಲಿ ಯಾವುದೇ ದಾಖಲೆಗಳಿಲ್ಲದ 20 ಲಕ್ಷ ರೂ. ಪತ್ತೆಯಾಗಿದೆ. ಕಾರಿನಲ್ಲಿ ಚಾಲಕ ಸೀಟಿನಲ್ಲಿ ಒಬ್ಬರು ಮಾತ್ರ ಇದ್ದು ಅವರು ಹಣದ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ವಿಫಲರಾಗಿದ್ದರು. ಹಣವನ್ನು ವಶಪಡಿಸಿಕೊಂಡಿರುವ ಪೊಲೀಸರು ಸೂಕ್ತ ದಾಖಲೆ ನೀಡಿ ಹಣ ಪಡೆಯುವಂತೆ ಮಾಲಕರಿಗೆ ತಿಳಿಸಿದ್ದಾರೆ. ಕಾರು ಬೆಳ್ತಂಗಡಿಗೆ ತೆರಳುತ್ತಿತ್ತೆಂದು ತಿಳಿದುಬಂದಿದೆ.