ಡೈಲಿ ವಾರ್ತೆ:18 ಮಾರ್ಚ್ 2023

ರಬ್ಬರ್ ಟ್ಯಾಪಿಂಗ್ ಸಂದರ್ಭದಲ್ಲಿ ಟ್ಯಾಪಿಂಗ್ ಕತ್ತಿ ಆಕಸ್ಮಿಕವಾಗಿ ಎದೆಗೆ ಹೊಕ್ಕು ಮಹಿಳೆ ಮೃತ್ಯು!

ಸುಳ್ಯ: ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಮಾಡುತ್ತಿದ್ದಾಗ ಟ್ಯಾಪಿಂಗ್ ಕತ್ತಿ ಆಕಸ್ಮಿಕವಾಗಿ ಎದೆಗೆ ಹೊಕ್ಕು ಗಂಭೀರ ಗಾಯಗೊಂಡು ಮಹಿಳೆಯೋರ್ವರು ಮೃತಪಟ್ಟ ದಾರುಣ ಘಟನೆ ನಡೆದಿದೆ. ಎಡಮಂಗಲ ಗ್ರಾಮದ ಬಳಕ್ಕಬೆ ಎಂಬಲ್ಲಿ ಈ ಘಟನೆ ಇಂದು ನಡೆದಿದೆ. ಗೀತಾ ಮೃತ ಮಹಿಳೆ.

ಎಡಮಂಗಲ ಗ್ರಾಮದ ಬಳಕ್ಕಬೆ ನಿವಾಸಿ ಶಿವರಾಮ ಎಂಬವರ ಪತ್ನಿ ಗೀತಾರವರು ತಮ್ಮದೇ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ಮುಗಿಸಿ ಸುಮಾರು 7 ಗಂಟೆ ಹೊತ್ತಿಗೆ ಮನೆಗೆ ವಾಪಾಸಾಗುತ್ತಿದ್ದರು. ಈ ವೇಳೆ ಎಡವಿ ಬಿದ್ದರೆನ್ನಲಾಗಿದೆ. ಈ ಸಂದರ್ಭ ಹರಿತವಾದ ಕತ್ತಿ ಎದೆಯೊಳಗೆ ಹೊಕ್ಕು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಪತಿ ಪೊಲೀಸ್ ದೂರು ನೀಡಿದ್ದು, ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.