ಡೈಲಿ ವಾರ್ತೆ:18 ಮಾರ್ಚ್ 2023

ಮಾಜಿ ಸಚಿವ ರಮಾನಾಥ ರೈ ನೇತ್ರತ್ವದ 7ನೇ ದಿನದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ: ಬಹುಮುಖ ಸಂಸ್ಕೃತಿಗಳ ಪ್ರತೀಕವೇ ಕಾಂಗ್ರೆಸ್ ಪಕ್ಷ – ಎಂ.ಜಿ.ಹೆಗ್ಡೆ

ಬಂಟ್ವಾಳ: ಬಹುಮುಖ ಸಂಸ್ಕೃತಿಗಳ ಪ್ರತೀಕವೇ ಕಾಂಗ್ರೆಸ್ ಪಕ್ಷ, ಭಾರತದ ಅಸ್ಮಿತೆಯೇ ಬಹುಮುಖೀ ಸಂಸ್ಕೃತಿಯಾಗಿದೆ ಕಾಂಗ್ರೆಸ್ ವಾರ್ ರೂಂ ಮುಖ್ಯಸ್ಥ ಎಂದು ಎಂ.ಜಿ.ಹೆಗ್ಡೆ ಹೇಳಿದರು.

ಮಾಜಿ ಸಚಿವ ರಮಾನಾಥ ರೈ ನೇತ್ರತ್ವದಲ್ಲಿ ನಡೆಯುತ್ತಿರುವ ಏಳನೇ ದಿನದ ಪ್ರಜಾಧ್ವನಿ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು
ಚುನಾವಣೆ ಬಂದಾಗ ಬಿಜೆಪಿಯು ಹಿಂದುತ್ವ, ಭಾವನಾತ್ಮಕ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡು ಚುನಾವಣೆಯನ್ನು ಎದುರಿಸುವುದು ಬಿಟ್ಟರೆ ಅಭಿವೃದ್ಧಿಯ ರಾಜಕಾರಣ ಇಲ್ಲ ಎಂದು ಆರೋಪಿಸಿದರು.

ಬಿಜೆಪಿ ವಿರುದ್ದ ಮಾತನಾಡುವವ ರಿಗೆ ಹಿಂದೂ ವಿರೋಧಿ ಪಟ್ಟ ಕಟ್ಟುವ ಬಿಜೆಪಿಗರು ಜನರಿಗೆ ಕೊಟ್ಟದ್ದು ಜೈಲು ಭಾಗ್ಯ, ಆಸ್ಪತ್ರೆ ಭಾಗ್ಯ ಹಾಗೂ ಸ್ಮಶಾನ ಭಾಗ್ಯ ಮಾತ್ರ ಕುಹಕವಾಡಿದರು.

ಪ್ರಜಾಧ್ವನಿ ಯಾತ್ರೆಯ ರೂವಾರಿ, ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಅಪಪ್ರಚಾರಕ್ಕೆ ಇನ್ನು ಮುಂದೆ ಜನ ಬೆಲೆ ನೀಡಲಾರರು. ಶವ ಸಂಸ್ಕಾರಕ್ಕೆ ಕೊಡುವ ಐದು ಸಾವಿರವನ್ನೂ ಕೊಡಲಾಗದ ದರಿದ್ರ ಸರಕಾರ ರಾಜ್ಯದಲ್ಲಿದೆ. ಬಂಟ್ವಾಳ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವ ನನ್ನ ಕನಸು ನನ್ನ ಸೋಲಿನ ಬಳಿಕ ನೆನೆಗದಿಗೆ ಬಿದ್ದಿದೆ. ಇನ್ನೊಮ್ಮೆ ನನಗೆ ಅವಕಾಶ ನೀಡಿದರೆ ಗೆದ್ದ ತಕ್ಷಣ ಬಂಟ್ವಾಳ ಪುರಸಭೆಯನ್ನು ನಗರ ಸಭೆಯಾಗಿ ಮೇಲ್ದರ್ಜೆಗೇರಿಸುವ ಕಾರ್ಯ ಮುಂದುವರಿಸುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಯಾತ್ರೆಯ ಪ್ರಮುಖರಾದ ಪಿಯೂಸ್ ಎಲ್. ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪದ್ಮಶೇಖರ್ ಜೈನ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಅಬ್ಬಾಸ್ ಆಲಿ, ಅರ್ಶದ್ ಸರವು, ಉಸ್ಮಾನ್ ಕರೋಪಾಡಿ, ಮಹಮ್ಮದ್ ನಂದರಬೆಟ್ಟು, ಮುಹಮ್ಮದ್ ಶರೀಫ್ ಶಾಂತಿ ಅಂಗಡಿ, ವಾಸು ಪೂಜಾರಿ, ಲೋಲಾಕ್ಷ ಶೆಟ್ಟಿ, ಹಸೈನಾರ್, ಕೆ.ಕೆ.ಶಾಹುಲ್ ಹಮೀದ್, ಸುದರ್ಶನ ಜೈನ್, ಸಂಜೀವ ಪೂಜಾರಿ, ರಝಾಕ್ ಕುಕ್ಕಾಜೆ ಮೊದಲಾದವರು ಉಪಸ್ಥಿತರಿದ್ದರು. ಇದೇ ವೇಳೆ ಯುವ ಜೆಡಿಎಸ್ ಮುಖಂಡ ಜಿ.ಎ. ಅಮಾನುಲ್ಲಾ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಸ್ವಾಗತಿಸಿ, ರಾಜೀವ್ ಶೆಟ್ಟಿ ಎಡ್ತೂರು ಪ್ರಸ್ತಾವನೆಗೈದರು. ಪಾಣೆಮಂಗಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಇಕ್ಬಾಲ್ ವಂದಿಸಿದರು. ಮಾಣಿ ಗ್ರಾ ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.