ಡೈಲಿ ವಾರ್ತೆ:20 ಮಾರ್ಚ್ 2023

ಡಿಸಿ ಕಚೇರಿ ಮುಂದೆ ಆಜಾನ್ ಕೂಗಿದ ವಿಚಾರ: ಹಿಂದೂಪರ ಕಾರ್ಯಕರ್ತರಿಂದ ಗೋಮೂತ್ರ ಸಿಂಪಡಿಸಿ ಪ್ರತಿಭಟನೆ

ಶಿವಮೊಗ್ಗ: ಡಿಸಿ ಕಚೇರಿ ಆವರಣದ ಮೆಟ್ಟಿಲು ಮೇಲೆ ಆಜಾನ್ ಕೂಗಿದ ವಿಚಾರವನ್ನು ಖಂಡಿಸಿ ಶಿವಮೊಗ್ಗದಲ್ಲಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಪ್ರತಿಭಟಿಸಿದ್ದಾರೆ. ಮುಸಲ್ಮಾನರು ಮತಾಂಧತೆ ಹರಡುತ್ತಿದ್ದಾರೆಂದು, ಗೂಂಡಾ ಮುಸಲ್ಮಾನರು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಸಂವಿಧಾನ ವಿರೋಧಿ ಎಸ್.ಡಿ.ಪಿ.ಐ. ನಾಯಿಗಳಿಗೆ ದಿಕ್ಕಾರ ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಗೋಮೂತ್ರ ಸಿಂಪಡಣೆಗೆ ಮುಂದಾದ ಬಜರಂಗದಳ ಕಾರ್ಯಕರ್ತರಿಂದ ಪೊಲೀಸರು ಗೋಮೂತ್ರದ ಬಾಟಲಿಯನ್ನು ಕಸಿದುಕೊಂಡಿದ್ದಾರೆ.
ಆದರೂ ಗೋಮೂತ್ರ ಸಿಂಪಡಿಸಿ ಜಾಗ ಶುದ್ಧಿ ಮಾಡಿದ ಮುಖಂಡರು ದೇಶದ್ರೋಹಿ ಮತಾಂಧ ಮುಸಲ್ಮಾನರಿಗೆ ಧಿಕ್ಕಾರ ಕೂಗಿದ್ದಾರೆ. ಅಜಾನ್ ಕೂಗಿದ ವ್ಯಕ್ತಿ ಹಾಗೂ ಆತನ ಹಿಂದಿರುವ ವ್ಯಕ್ತಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.