ಡೈಲಿ ವಾರ್ತೆ:21 ಮಾರ್ಚ್ 2023

ಐಫೋನ್ ಮೊಬೈಲ್‌ ಖತರ್ನಾಕ್ ಕಳ್ಳರ ಬಂಧನ

ಬೆಂಗಳೂರು: ಬೆಲೆಬಾಳುವ ಐಫೋನ್ ಮೊಬೈಲ್‌ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಖದೀಮರನ್ನು ಬಂಧಿಸುವಲ್ಲಿ ವಿವೇಕನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಗೋರಿಪಾಳ್ಯ ನಿವಾಸಿಗಳಾದ ಮಹಮ್ಮದ್ ಸಕ್ಲೇನ್ , ಸುಹೇಲ್, ಸಾಕೀಬ್ ಬಂಧಿತರು.
ಐಫೋನ್ ಮೊಬೈಲ್‌ಗಳು ಇತೆರೆ ಕಂಪೆನಿಯ ಮೊಬೈಲ್ ಗಳಿಗಿಂತ ಹೆಚ್ಚು ಬೆಲೆ ಬಾಳುತ್ತದೆ. ಹೀಗಾಗಿ ಖದೀಮರು ಈ ಮೊಬೈಲ್‌ಗಳನ್ನು ಗುರಿಯಾಗಿಸಿಕೊಂಡಿದ್ದರು. ಬಳಿಕ ರಸ್ತೆ ಬದಿ ಫೋನ್‌ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದವರನ್ನು ಗುರಿಯಾಗಿಸಿಕೊಂಡು, ಸಿನಿಮೀಯ ರೀತಿಯಲ್ಲಿ ಕಳ್ಳತನ ನಡೆಸುತ್ತಿದ್ದರು.

ಮಧ್ಯರಾತ್ರಿ ವೇಳೆ ಕೆಲಸ ಮುಗಿಸಿಕೊಂಡು ಬರುವವರನ್ನು ಅಡ್ಡಗಟ್ಟಿ ರಾಬರಿ ಮಾಡುತ್ತಿದ್ದ ಈ ಗ್ಯಾಂಗ್, ಒಂದು ವೇಳೆ ಮೊಬೈಲ್ ಅಥವಾ ಹಣ ಕೊಡದೇ ಇದ್ದಾಗ ಮಾರಣಾಂತಿಕವಾಗಿ ಹಲ್ಲ ಮಾಡಿ ಪರಾರಿಯಾಗುತ್ತಿದ್ದರು. ಸದ್ಯ ವಿವೇಕನಗರ ಪೊಲೀಸರಿಗೆ ಖತರ್ನಾಕ್ ಗ್ಯಾಂಗ್ ಸಿಕ್ಕಿಬಿದ್ದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಬಂಧಿತರಿಂದ 40 ಐಫೋನ್ ಮೊಬೈಲ್ ಸೇರಿ ಒಟ್ಟು 110 ಪೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.