ಡೈಲಿ ವಾರ್ತೆ:21 ಮಾರ್ಚ್ 2023

ತಂಪು ಪಾನೀಯ ಸಾಗಿಸುತ್ತಿದ್ದ ಲಾರಿ ಪಲ್ಟಿ: ಮುಗಿಬಿದ್ದು ತಂಪು ಪಾನೀಯ ಬಾಟಲ್ ಬಾಕ್ಸ್ ಗಳನ್ನು ಹೊತ್ತೊಯ್ದ ಸಾರ್ವಜನಿಕರು (ವಿಡಿಯೋ ವೀಕ್ಷಿಸಿ)

ಬೆಳಗಾವಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಸಮೀಪ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ತಂಪು ಪಾನೀಯ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿದೆ.

ಪರಿಣಾಮ ಅಲ್ಲಿದ್ದ ಸಾರ್ವಜನಿಕರು ಮುಗಿಬಿದ್ದು ತಮ್ಮ ಬೈಕ್, ಇತರೆ ವಾಹನಗಳಲ್ಲಿ ತಂಪು ಪಾನೀಯ ಬಾಟಲ್ ಬಾಕ್ಸ್ ಗಳನ್ನು ಹೊತ್ತೊಯ್ದರು.
ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.