ಡೈಲಿ ವಾರ್ತೆ:23 ಮಾರ್ಚ್ 2023

ಗಂಗಾವಳಿ: ಉರ್ದು ಸ್ಕೂಲ್ ಇಂಗ್ಲಿಷ್ ಮೀಡಿಯಂ ಪ್ರೈಮರಿ ಸ್ಕೂಲ್ ನ 1ನೇವಾರ್ಷಿಕೋತ್ಸವ ಸಮಾರಂಭ

ಗಂಗಾವಳಿ: ಉರ್ದು ಶಾಲೆ ಇಂಗ್ಲಿಷ್ ಮೀಡಿಯಂ ಪ್ರೈಮರಿ ಸ್ಕೂಲ್ ಗಂಗಾವಳಿ ಇದರ 2022-23 ರ ಮೊದಲ ಶಾಲ ವಾರ್ಷಿಕೋತ್ಸವವು ಶಾಲೆಯ ಮುಖ್ಯ ವೇದಿಕೆಯಲ್ಲಿ ಶಾಲಾ ಮಂಡಳಿಯ ಅಧ್ಯಕ್ಷರಾದ ಅಲಿ ಎಮ್ ಮೌಲವಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪುಟಾಣಿ ಮಕ್ಕಳಿಂದ ಹಾಡು, ನೃತ್ಯ, ಹಾಗು ಸಾಂಸ್ಕೃ ತಿಕ ಕಾರ್ಯಕ್ರಮಗಳು ನಡೆದವು ಮುಖ್ಯ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ರಹೀಮುದ್ದಿನ್ ಶೇಕ್, ಇಂಥಿಯಾಜ್ ಉಮರ್ ಶೇಕ್ ಅಂಕೋಲಾ, ಕರೀಮ್ ಶೇಕ್ ಅಂಕೋಲಾ,ತಮಿರ್ ಬ್ಯಾಂಕ್ ನಿರ್ದೇಶಕರಾದ ಆಜಾದ್ ಅನಿಗೇರಿ, ಮಸ್ನವಿ ಮಲಿಕ್ ದೀನಾರ್ ಇದರ ಪ್ರಿನ್ಸಿಪಾಲ್ ಮೌಲನ ಸೈದಲವಿ ಸಖಾಫಿ, ಹನೀಫ್,ಹುಸೈನ್ ಬಿಜಾಪುರ, ಮಾಮೂದ್, ಮೂಹಿಯುದ್ದಿನ್ ಜಾಮಿಯ ಮಸ್ಜಿದ್ ಗಂಗಾವಳಿ ಇದರ ಅಧ್ಯಕ್ಷರು ನಜೀರ್ ಸಾಬ್, ಮುಖ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಅತಿಥಿಗಳನ್ನು ಶಂಬ್ರಿನ್ ಮಾಮೂದ್ ಸಾಬ್ ಸ್ವಾಗತಿಸಿದರು.
ನೋರೀನ್ ಅಲಿ ಸಾಬ್ ನಿರೂಪಿಸಿ ವಂದಿಸಿದರು.