ಡೈಲಿ ವಾರ್ತೆ:24 ಮಾರ್ಚ್ 2023

ದೀರ್ಘದಂಡ ನಮಸ್ಕಾರ ಸಲ್ಲಿಸುವಾಗ ಕಾರು ಹರಿದು ಯುವತಿ ಸ್ಥಳದಲ್ಲೇ ಮೃತ್ಯು!

ಚಿಕ್ಕೋಡಿ: ದೀರ್ಘ ದಂಡ ನಮಸ್ಕಾರ ಸಲ್ಲಿಸುವಾಗ ಕಾರು ಹರಿದು ಯುವತಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮದ ನಿವಾಸಿ ಐಶ್ವರ್ಯ ನಾಯಿಕ (22) ಸಾವನ್ನಪ್ಪಿದ ಯುವತಿ. ಗ್ರಾಮದ ಜಾತ್ರೆ ಹಿನ್ನೆಲೆ ಕೃಷ್ಣಾ ನದಿಯಿಂದ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಸಲ್ಲಿಸುವ ಸಂದರ್ಭ ತಲೆ ಮೇಲೆ ಕಾರಿನ ಚಕ್ರ ಹರಿದು ಸ್ಥಳದಲ್ಲೇ ಯುವತಿ ದುರ್ಮರಣ ಹೊಂದಿದ್ದಾಳೆ.
ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕನನ್ನು ಬಂಧಿಸಲಾಗಿದೆ.