


ಡೈಲಿ ವಾರ್ತೆ:25 ಏಪ್ರಿಲ್ 2023


ಉಡುಪಿ: ಪರ್ಕಳದಲ್ಲಿ ಕಂಡುಬಂದ ಶೂನ್ಯ ನೆರಳು…!!
ಉಡುಪಿ : ಪರ್ಕಳ ಪ್ರಮುಖ ಬಸ್ ಸ್ಟ್ಯಾಂಡ್ ನ ಬಳಿ ಇರುವ ಪ್ರೀತಿ ಹೋಟೆಲ್ನ ಎದುರು ಶೂನ್ಯ ನೆರಳನ್ನು ಸರಿಯಾದ ಸಮಯ 12 29ಕ್ಕೆ.. ನಿಂತುಕೊಂಡು ಛತ್ರಿ ಹಿಡಿಯುವ ಮೂಲಕ.. ಸೂರ್ಯನ ನೇರ ಪ್ರತಿಬಿಂಬ ಸರಳ ರೇಖೆಯಲ್ಲಿರುವುದು ಕಂಡು ಬಂದಿದೆ.
ಈ ಸಮಯವನ್ನು ಬಿಸಿಲಿನಲ್ಲಿ ಕಾದು ಕುಳಿತು ಸೆರೆಹಿಡಿದಿದ್ದಾರೆ..
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಗಣೇಶ್ ರಾಜ್ ಸರಳಬೆಟ್ಟು ರಾಜೇಶ್ ಪ್ರಭು ಪರ್ಕಳ. ಪ್ರೀತಿ ಹೋಟೆಲ್ ಮಾಲಕರಾದ ಕೆರಾಡಿಯ ಕರುಣಾಕರ ಶೆಟ್ಟಿ.. ಪ್ರಶಾಂತ ಆಚಾರ್ಯ ಹೆರ್ಗ ಜೊತೆಗಿದ್ದರು. ಸರಳ ರೇಖೆಯ ಪ್ರತಿಬಿಂಬವನ್ನು ಕಣ್ತುಂಬಿದ್ದಾರೆ..