ಡೈಲಿ ವಾರ್ತೆ:27 ಏಪ್ರಿಲ್ 2023

ವರದಿ: ವಿದ್ಯಾಧರ ಮೊರಬಾ

ಬಿಜೆಪಿ ಸರ್ಕಾರದಿಂದ ಜನರು ಬೇಸತ್ತಿದ್ದು, ಕಾಂಗ್ರೆಸ್ ಅಧಿಕಾರಕ್ಕೇರುವುದು ಖಚಿತ :ಸತೀಶ ಸೈಲ್

ಅಂಕೋಲಾ : ಬಿಜೆಪಿ ಅವರು ಕಳೆದ 5 ವರ್ಷಗಳಿಂದ ಜನರಿಗೆ ಆಸೆ ತೋರಿಸುತ್ತಲೇ ಬಂದಿದ್ದು, ಅವರ ದೊಡ್ಡ ಕೊಡುಗೆ ಎಂದರೆ ಬೆಲೆಯೇರಿಕೆ ಮಾಡಿದ್ದು, ಹೀಗಾಗಿ ಜನರು ಬಿಜೆಪಿ ಸರಕಾರದ ವಿರುದ್ಧ ರೋಸಿ ಹೋಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ ಮೂಲಕ ಪ್ರತಿಯೊಬ್ಬರಿಗೂ ಅನು ಕೂಲವಾಗುವಂತೆ ವಿಶಿಷ್ಟ ಯೋಜನೆ ಹಮ್ಮಿಕೊಂಡಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ ಸೈಲ್ ಹೇಳಿ ದರು.
ತಾಲೂಕಿನ ಕಂತ್ರಿಯಲ್ಲಿ ಬುಧವಾರ ಹಮ್ಮಿಕೊಂಡ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಅಲ್ಲದೇ ಈಗಾಗಲೇ ಸಾಕಷ್ಟು ಬಿಜೆಪಿಯವರು ಕಾಂಗ್ರೆಸಿಗೆ ಆಗಮಿಸಿದ್ದಾರೆ. ಈ ಹಿಂದೆ ನೀಡುತ್ತಿದ್ದ ವಸತಿ ಸೌಲಭ್ಯ ವನ್ನು ನೀಡಿಲ್ಲ. ಗುತ್ತಿಗೆದಾರರಿಗೆ ಹಣವನ್ನು ಕೂಡ ಪಾವತಿ ಮಾಡುತ್ತಿಲ್ಲ. ಇದರಿಂದಾಗಿ ಪ್ರತಿಯೊಬ್ಬರು ಸಂಕಷ್ಟಕ್ಕೀಡಾಗಿದ್ದು, ಕಾಂಗ್ರೆಸ್ ಪರವಾದ ಅಲೆ ಉಂಟಾಗಲು ಬಿಜೆಪಿಯವರ ಡೋಂಗಿ ರಾಜಕಾರಣವೇ ಸಾಕ್ಷಿ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ ಮಾತನಾಡಿ, ಸತೀಶ ಸೈಲ್ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರ ಅಧಿಕಾರವಧಿಯಲ್ಲಿ ಮಾಡ ಲಾಗಿದ್ದ ಕೆಲವು ಅಭಿವೃದ್ಧಿ ಕಾರ್ಯವನ್ನು ಕೂಡ ಮುಂದುವರೆಸಿಕೊಂಡು ಹೋಗಲು ಬಿಜೆಪಿಯವರಿಗೆ ಸಾಧ್ಯವಾಗಿಲ್ಲ ಎಂದರು.

ಸತೀಶ ಸೈಲ್‍ಗೆ ಗುತ್ತಿಗೆದಾರರ ಬೆಂಬಲ : ಕಾಂಗ್ರೆಸ್ ಅಭ್ಯರ್ಥಿ ಸತೀಶ ಸೈಲ್ ಪ್ರಚಾರ ಸಭೆಗೆ ಆಗಮಿಸಿದ ಗುತ್ತಿಗೆದಾರರು ತಮ್ಮ ಅಳಲನ್ನು ತೋಡಿಕೊಂಡರು. ಈ ಮೂಲಕ ಇಡೀ ಗುತ್ತಿಗೆದಾರರು ಕಾಂಗ್ರೆಸ್ ಜತೆಗಿದ್ದೇವೆ ಎಂಬ ಸಂದೇಶ ರವಾನಿಸಿದ್ದು, ಬಿಜೆಪಿ ವಿರುದ್ಧ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಮಾತನಾಡಿ, ಶೇ.40 ಕಮೀಷನ್ ಜತೆಗೆ ಬಿಲ್ ಕೂಡ ಪಾಸಾಗುತ್ತಿಲ್ಲ. ಹೀಗಾಗಿ ಬಿಜೆಪಿ ಸರಕಾರದ ಅವಧಿಯಲ್ಲಿ ಗುತ್ತಿಗೆದಾರರು ಹೈರಾಣಾಗಿದ್ದಾರೆ ಎಂದರು.
ಗುತ್ತಿಗೆದಾರರಾದ ಉಪೇಂದ್ರ ನಾಯ್ಕ, ಸಂಜೀವ ಮೋದಿ, ವಿಕ್ರಮ ಪಂಥ, ವಿನೋದ ಗಾಂವಕರ, ಮುರ್ಕುಂಡಿ ನಾಯ್ಕ, ರವಿ ನಾಯ್ಕ, ಗಣೇಶ ನಾಯ್ಕ, ನಾಗೇಶ ನಾಯ್ಕ, ಕುಮಾರ ನಾಯ್ಕ ಜಿಪಂ. ಮಾಜಿ ಸದಸ್ಯ ವಿನೋದ ನಾಯಕ, ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷ ಎಂ.ಪಿ. ನಾಯ್ಕ, ಬಿ.ಡಿ.ನಾಯ್ಕ, ರಮಾನಂದ ನಾಯಕ, ಮಂಜುನಾಥ ನಾಯ್ಕ, ಡಿ.ಜಿ.ನಾಯ್ಕ, ಗೋಪು ನಾಯಕ ಸೈಯದ್ ಪಪ್ಪು, ಜಗದೀಶ ಖಾರ್ವಿ, ಕಾರ್ತಿಕ ನಾಯ್ಕ, ನಾರಾಯಣ ಶೆಟ್ಟಿ, ಪುರುಷೋತ್ತಮ ನಾಯ್ಕ, ಮೊನ್ನಪ್ಪ ನಾಯ್ಕ ಉಪಸ್ಥಿತರಿದ್ದರು.