ಡೈಲಿ ವಾರ್ತೆ:27 ಏಪ್ರಿಲ್ 2023

ಮುಂಬಯಿ – ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಸರಣಿ ಅಪಘಾತ: 10 ಕ್ಕೂ ಹೆಚ್ಚು ವಾಹನಗಳು ಜಖಂ

ಮುಂಬಯಿ: ಟ್ರಕ್ ವೊಂದರ ಬ್ರೇಕ್ ವೈಫಲ್ಯಗೊಂಡು ಉಂಟಾದ ಸರಣಿ ಅಪಘಾತದಲ್ಲಿ ಸುಮಾರು ಹನ್ನೊಂದು ವಾಹನಗಳು ಜಖಂಗೊಂಡು ಆರು ಮಂದಿ ಗಾಯಗೊಂಡಿರುವ ಘಟನೆ ಮುಂಬೈ – ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಗುರುವಾರ ಸಂಭವಿಸಿದೆ.

ಗುರುವಾರ ಮಧ್ಯಾಹ್ನದ ವೇಳೆ ಮುಂಬೈ – ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುತ್ತಿದ್ದ ಟ್ರಕ್ ರಾಯಗಡ್ ಜಿಲ್ಲೆಯ ಖೋಪೋಲಿ ಬಳಿ ಬ್ರೇಕ್ ವೈಫಲ್ಯಗೊಂಡು ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸುಮಾರು ಹತ್ತಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ವಾಹನಗಳು ಜಖಂಗೊಂಡಿದ್ದು ಆರು ಮಂದಿ ಗಾಯಗೊಂಡಿದ್ದಾರೆ.

ಅಪಘಾತ ಸಂಭವಿಸಿದ ವಿಚಾರ ತಿಲಿಯುತ್ತಲೇ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು. ಅಲ್ಲದೆ ಹೆದ್ದಾರಿಯಲ್ಲಿ ಅಪಘಾತದ ತೀವ್ರತೆಗೆ ಕಾರುಗಳು ಸಂಪೂರ್ಣ ಜಖಂಗೊಂಡಿವೆ.