ಡೈಲಿ ವಾರ್ತೆ: 13 ಮೇ 2023
ವರದಿ : ವಿದ್ಯಾಧರ ಮೊರಬಾ
ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದ ಸತೀಶ ಸೈಲ್, ಕಾರ್ಯಕರ್ತರಿಂದ ವಿಜಯೋತ್ಸವ ಮೆರವಣಿಗೆ
ಅಂಕೋಲಾ : ತೀವೃ ಕುತೂಹಲ ಮೂಡಿಸಿದ್ದ ಕಾರವಾರ-ಅಂಕೋಲಾ ವಿಧಾನಸಭಾ ಚುನಾವಣೆಯಲ್ಲಿ ಮತದಾರ ಪ್ರತಿ ಐದು ವರ್ಷಕ್ಕೊಮ್ಮೆ ಅಭ್ಯರ್ಥಿಗಳನ್ನು ಬದಲಿಸುತ್ತಾರೆ ಎನ್ನುವುದಕ್ಕೆ ಶನಿವಾರ ನಡೆದ ಮತ ಎಣ ಕೆಯಲ್ಲಿ ಸಾಬೀತಾಗಿದೆ. ಹಾಲಿ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಅವರನ್ನು ಸೋಲಿಸಿ ಕಾಂಗ್ರೆಸ್‍ನ ಸತೀಶ ಸೈಲ್ ಗೆಲುವನ್ನು ಸಾಧಿಸಿದರು.
ತಮ್ಮ ನಾಯಕನ ಗೆಲುವನ್ನು ಸಂಭ್ರಮಿಸಿದ ಕಾರ್ಯಕರ್ತರು ಅಂಕೋಲಾದಿಂದ ತೆರೆದ ವಾಹನದಲ್ಲಿ ಸಹಸ್ರಾರು ಜನರು ಸೇರಿ ಸ್ವಾಗತಿಸಿ ಬರಮಾಡಿಕೊಂಡರು.
ಪಟ್ಟಣದಾದ್ಯಂತ ಸಂಚರಿಸಿದರು. ಈ ಸಂದ ರ್ಭದಲ್ಲಿ ಸತೀಶ ಸೈಲ್ ಮಾತನಾಡಿ, ನನ್ನನ್ನು ಆಯ್ಕೆ ಮಾಡಿದ ಕಾರವಾರ-ಅಂಕೋಲಾ ಕ್ಷೇತ್ರದ ಮತ ದಾರರಿಗೆ ಧನ್ಯವಾದಗಳು. ಈ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ನಿರಂತರವಾಗಿ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ವಿನೋದ ನಾಯಕ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವಕರ, ಕಾಂಗ್ರೆಸ್ ಮುಖಂಡರಾದ ಶಂಭು ಶೆಟ್ಟಿ, ಜಿ.ಎಂ.ಶೆಟ್ಟಿ, ಮಂಜುನಾಥ ಡಿ. ನಾಯ್ಕ, ಬಿ.ಡಿ. ನಾಯ್ಕ, ರಾಜೇಶ ಎಂ. ನಾಯ್ಕ, ಕಾರ್ತಿಕ ಎಸ್. ನಾಯ್ಕ, ಪ್ರಕಾಶ ಗೌಡ, ಅಶೋಕ ಶೇಡಗೇರಿ, ಅಂಜಲಿ ಐಗಳ, ಜಯಪ್ರಕಾಶ ನಾಯ್ಕ, ಮಂಜುನಾಥ ಕೆ. ನಾಯ್ಕ, ಜಗದೀಶ ಖಾರ್ವಿ, ಸುರೇಶ ನಾಯ್ಕ ಅಸ್ಲೆಗದ್ದೆ, ಪಾಂಡು ಗೌಡ ಬಡಗೇರಿ, ಮೊನ್ನಪ್ಪ ನಾಯ್ಕ, ಗಣಪತಿ ನಾಯಕ ಅಲಗೇರಿ, ಉಪೇಂದ್ರ ನಾಯ್ಕ, ಉದಯಕುಮಾರ ನಾಯ್ಕ ಕೇಣ , ರಾಜು ಹರಿಕಂತ್ರ, ಪ್ರವೀಣ ನಾಯಕ ಹಿಲ್ಲೂರು, ಸೀಮಾ ಕೇಣ , ರವಿ ನಾಯ್ಕ, ಶೋಭಾ ಎಸ್.ನಾಯ್ಕ, ಸೈಯದ ಪಪ್ಪು, ಪುರುಷೋತ್ತಮ ನಾಯ್ಕ, ಸಂಜೀವ ಬಲೇಗಾರ ಸೇರಿದಂತೆ ಐನ್ನೂರಕ್ಕೂ ಕಾರ್ಯಕರ್ತರು, ಅಭಿಮಾ ನಿಗಳು ಉಪಸ್ಥಿತರಿದ್ದರು.