ಡೈಲಿ ವಾರ್ತೆ:17 ಮೇ 2023

ಪತ್ರಕರ್ತ ಓಂಕಾರ್ ತಾಳಗುಪ್ಪ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷನಿಂದ ಜೀವ ಬೆದರಿಕೆ: ಸಿ.ಎಸ್.ಷಡಾಕ್ಷರಿ ವಿರುದ್ಧ ಎಫ್ಐಆರ್ ದಾಖಲು.!

ಸಾಗರ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ನಗರಸಭೆ ಆವರಣದಲ್ಲಿರುವ ಗಾಂಧಿ ಮೈದಾನದಲ್ಲಿ ಜನವರಿಯಲ್ಲಿ ಸಾಗರದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಸಮಾವೇಶದಲ್ಲಿ ಆರ್ ಟಿಐ ಕಾರ್ಯಕರ್ತ ಹಾಗೂ ಪತ್ರಕರ್ತ ಓಂಕಾರ್ ತಾಳಗುಪ್ಪನವರ ವಿರುದ್ಧ ಮಾತನಾಡಿದ ಪ್ರಕರಣ ಈಗ ಪಿಸಿಆರ್ ಮೂಲಕ ಎಫ್ಐಆರ್ ದಾಖಲಾಗಿದೆ.

ಜನವರಿ 12 ರಂದು ಸಾಗರದ ಗಾಂಧಿ ಮೈದಾನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಸಾಗರ ಶಾಖೆಯ ವತಿಯಿಂದ ಕನ್ನಡ ರಾಜ್ಯೋತದವ ಅಂಗವಾಗಿ ನಿವೃತ್ತ ನೌಕರರಿಗೆ, ಮಾಜಿ ಯೋಧರಿಗೆ ಅಭಿನಂದನೆ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಅಭಿನಂದನೆ ಹಾಗೂ ತಾಲೂಕು ನೌಕರರ ಸಮಾವೇಶ ನಡೆದಿತ್ತು.

ಮುಖ್ಯ ಅತಿಥಿ ಭಾಷಣ ಮಾಡಲು ಮುಂದಾಗಿದ್ದ ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಆರ್ ಟಿಐ ಕಾರ್ಯಕರ್ತ ಮತ್ತು ಪತ್ರಕರ್ತರಾಗಿದ್ದ ಓಂಕಾರ್ ತಾಳಗುಪ್ಪ ಅವರ ವಿರುದ್ಧ ಬೆದರಿಕೆ ಹಾಕುವಂತಹ ಮಾತನಾಡಿರುವುದು ಎಫ್ಐಆರ್ ಆಗಿದೆ.

ಇದು ಶಿವಮೊಗ್ಗ ಜಿಲ್ಲೆ ನಿನಗೆ ನನ್ನ ವಿಷಯ ಗೊತ್ತಿಲ್ಲ, ಮುಂದೆ ಜೀವನ ನಡೆಸುವುದು ಕಷ್ಟವಾಗಬಹುದು ಈ ಹಿಂದೆ ನನ್ನ ವಿರುದ್ಧ ಹೇಳಿಕೆ ನೀಡಿದವರ ವಿರುದ್ಧ ಶಿಕಾರಿಪುರದಲ್ಲಿ, ಜಿಲ್ಲಾ ಪಂಚಾಯತ್ ಸದಸ್ಯನಿಗೆ ಜೈಲಿಗೆ ಕಳಿಸಿರುತ್ತೇನೆ ಎಚ್ಚರಿಕೆ ಇರಲಿ” ಎಂದು ಏರುಧ್ವನಿಯಲ್ಲಿ, ಬೈದು ಪ್ರಾಣ ಬೆದರಿಕೆ ಹಾಕಿದ್ದು, ಮೇಲ್ಕಂಡ ಆರೋಪಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಓಂಕಾರಪ್ಪ ಕೋರ್ಟ್ ಪಿಸಿಆರ್ ಮೂಲಕ ಎಫ್ಐಆರ್ ದಾಖಲಿಸಿದ್ದಾರೆ.