ಡೈಲಿ ವಾರ್ತೆ: 20 ಜೂನ್ 2023
ಕೋಟ:ಪಡುಕರೆ ಬಸ್ ತಂಗುದಾಣ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ
ಕೋಟ: ಇಲ್ಲಿನ ಕೋಟ ಗ್ರಾ.ಪಂ. ವ್ಯಾಪ್ತಿಯ ಪಡುಕರೆ ಸರ್ಕಲ್ ಬಳಿ ಇರುವ ಬಸ್ ತಂಗುದಾಣ ಸರಿಪಡಿಸಲು ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಸುಮಾರು 50 ವರ್ಷ ಹಿನ್ನೆಲೆಯುಳ್ಳ ಈ ಬಸ್ ತಂಗುದಾಣ ಇತ್ತೀಚಿಗೆ ಜೀರ್ಣಾವಸ್ಥೆಗೆ ತಲುಪಿದ್ದು, ಸ್ಥಳೀಯ ಶಾಲಾ ಕಾಲೇಜಿನ ಸಾಕಷ್ಟು ವಿದ್ಯಾರ್ಥಿಗಳು, ಸಾರ್ವಜನಿಕರು ಈ ತಂಗುದಾಣದಲ್ಲಿ ಆಶ್ರಯ ಪಡೆಯುತ್ತಿದ್ದರು. ಇದರ ಮೇಲ್ಚಾವಣಿ ಹಾನಿಗೊಳಗಾಗಿ ಅದನ್ನು ಸ್ಥಳೀಯಾಡಳಿತ ಸ್ಥಳಾಂತರಿಸಿತು.
ಈ ಹಿನ್ನೆಲೆಯಲ್ಲಿ ಸರಿಪಡಿಸಲು ಸಾಕಷ್ಟು ಬಾರಿ ಕೋಟ ಗ್ರಾ. ಪಂ.ಗೆ ಮನವಿ ನೀಡಿಯೂ ಪಂಚಾಯತ್ ನಿರಾಸಕ್ತಿ ತೋರುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅಲ್ಲದೆ ಪ್ರಸ್ತುತ ಮಳೆಗಾಲದ ಮೊದಲು ಸರಿಪಡಿಸಿ ಜನಸಾಮಾನ್ಯರಿಗೆ ಅನುಕೂಲವಾಗಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.