ಡೈಲಿ ವಾರ್ತೆ:05 ಜುಲೈ 2023

ತೆಲುಗು ನಟ ಪ್ರಭಾಸ್ ಅಭಿನಯದ “ಸಲಾರ್” ಚಿತ್ರದಲ್ಲಿ ಮಿಂಚುತ್ತಿರುವ ಕನ್ನಡ ಚಲನಚಿತ್ರರಂಗದ ಭವಿಷ್ಯದ ಕುಡಿ ತೆಕ್ಕಟ್ಟೆಯ ವಜ್ರಾಂಘ ಶೆಟ್ಟಿ

ಡಾ. ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್ ‘ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ ಉಡುಪಿ ಜಿಲ್ಲೆಯ ತೆಕ್ಕಟ್ಟೆಯ ವಜ್ರಾಂಘ ಶೆಟ್ಟಿ ಇವರು ಈ ಬಾರಿ ತೆಲುಗು ಸಿನೆಮಾದಲ್ಲಿ ಅದರಲ್ಲೂ ಪ್ರಭಾಸ್ ನಾಯಕರಾಗಿ ನಟಿಸಿದ ‘ಸಲಾರ್’ ಚಿತ್ರದಲ್ಲಿ ಮಿಂಚಲಿದ್ದಾರೆ.

ಅತೀ ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಸಲಾರ್’ (Salaar) ದ ಟೀಸರ್ ರಿಲೀಸ್ ದಿನಾಂಕ ಮತ್ತು ವೇಳೆ ಫಿಕ್ಸ್ ಆಗಿದ್ದು ಜುಲೈ 6 ರಂದು ಬಿಡುಗಡೆಯಾಗುತ್ತಿದೆ.