ಡೈಲಿ ವಾರ್ತೆ: 10 ಜುಲೈ 2023

ಮಾವಿನ ಮರದಡಿ ಮಲಗಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ.! ರಕ್ಷಣೆ ಮಾಡಿದ ಉರಗ ತಜ್ಞ ಹರೇಂದ್ರ

ಚಿಕ್ಕಮಗಳೂರು: ಚಿಕ್ಕಮಗಳೂರಿನ ಎನ್.ಆರ್. ಪುರ ತಾಲೂಕಿನ ಸುಂಟಿಕೊಪ್ಪ ಕೆರೆ ಬಳಿಯ ಮಾವಿನ ಮರದ ಕೆಳಗೆ ಮಲಗಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞ ಹರೇಂದ್ರ ಅವರು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ರಸ್ತೆಯಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಕಂಡ ದಾರಿಹೋಕರು ಗಾಬರಿಗೊಂಡಿದ್ದಾರೆ. ಕೂಡಲೇ ಉರಗ ರಕ್ಷಕರನ್ನು ಸ್ಥಳಕ್ಕೆ ಭೇಟಿ ನೀಡಿ, ಹಾವನ್ನು ಸುರಕ್ಷಿತ ಪ್ರದೇಶಕ್ಕೆ ಬಿಡುವಂತೆ ಕರೆ ಮಾಡಿ ತಿಳಿಸಿದ್ದಾರೆ. ಉರಗ ತಜ್ಞ ಹರೇಂದ್ರ ಅವರು ಆಗಮಿಸಿ ಕಿಂಗ್ ಕೋಬ್ರಾವನ್ನು ಮಾವಿನ ಮರದ ಕೊಂಬೆಯನ್ನು ಉರುಳಿಸಿ ನಂತರ ರಕ್ಷಿಸಿದ್ದಾರೆ.
12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಹತ್ತಿರದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಇದು ಉರಗ ತಜ್ಞ ಹರೇಂದ್ರ ಅವರು ರಕ್ಷಣೆ ಮಾಡಿದ 303ನೇ ಕಿಂಗ್ ಕೋಬ್ರಾ ಎಂಬುದು ಗಮನಾರ್ಹ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ