ಡೈಲಿ ವಾರ್ತೆ: 21 ಜುಲೈ 2023

ವರದಿ: ವಿದ್ಯಾಧರ ಮೊರಬಾ

ಅವರ್ಸಾದಲ್ಲಿ ಎನ್.ಸಿ.ಸಿ ಉಡಾನ್ ಉತ್ತರ ಕನ್ನಡ ಜಿಲ್ಲಾ ಅಧ್ಯಾಯ ಕಾರ್ಯಕ್ರಮ

ಅಂಕೋಲಾ : ಎನ್.ಸಿ.ಸಿ.ಉಡಾನ್ ಉತ್ತರ ಕನ್ನಡ ಜಿಲ್ಲಾ ಅಧ್ಯಾಯ ಕಾರ್ಯಕ್ರವು ಜು.22 ಶನಿವಾರ ಮುಂಜಾನೆ 9 ಗಂಟೆಗೆ ತಾಲೂಕಿನ ಅವರ್ಸಾದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿ ಸಲಾಗಿದೆ ಎಂದು ಎನ್.ಸಿ.ಸಿ.ಉಡಾನ್ ಕರ್ನಾಟಕ ರಾಜ್ಯಾಧ್ಯಕ್ಷೆ ಮತ್ತು ಚಲನಚಿತ್ರ ನಟಿ ಹಾಗೂ ಕಿರುತೆರೆ ಅಭಿನೇತ್ರಿ ಯಮುನಾ ಶ್ರೀನಿಧಿ ಹೇಳಿದರು.

ಇಲ್ಲಿಯ ಜಿ.ಸಿ.ಕಾಲೇಜಿಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿ, ಹಳೆಯ ಎನ್. ಸಿ.ಸಿ.ಕೆಡೆಟ್‍ಗಳು ಸೇರಿಕೊಂಡು ರೂಪಿಸಿರು ಈ ಕಾರ್ಯಕ್ರಮ ಗ್ರಾಮ ಮಿತ್ರ ಎಂಬ ಗ್ರಾಮೀಣ ಅಭಿವೃ ದ್ಧಿಯ ಚಟುವಟಿಕೆಗಳ ಮೂಲಕ ಯುವಕರಲ್ಲಿ ಗ್ರಾಮೀಣದ ಜೀವನದ ವಿವಿಧ ಆಯಾಮಗಳನ್ನು ಪರಿ ಚಯಿಸುವ ಉದ್ದೇಶವನ್ನು ಹೊಂದಿರುತ್ತದೆ. ದೇಶದಲ್ಲಿಯೇ ಎನ್.ಸಿ.ಸಿ.ಉಡಾನ ಅಧ್ಯಾಯವನ್ನು ಪ್ರಾರಂಭಿಸಿರುವ ಉತ್ತರ ಕನ್ನಡ 2ನೇ ಜಿಲ್ಲೆಯಾಗಿದೆ. ಕಾರ್ಯಕ್ರಮದಲ್ಲಿ ಗ್ರಾಮೀಣ ಯುವಕರಿಗೆ ಚರ್ಚಾ ಸ್ಪರ್ಧೆ, ಪೋಸ್ಟರ ಮೇಕಿಂಗ್ ಮೊದಲಾದ ಸ್ಪರ್ಧೆಗಳು ಏರ್ಪಡಿಸಲಾಗಿದೆ ಎಂದರು.

ಪ್ರಾಚಾರ್ಯ ಡಾ.ಎಸ್.ವಿ.ವಸ್ತ್ರದ ಅವರಿಂದ ಕಾಲೇಜಿನಲ್ಲಿ ಪುನಃ ಎನ್.ಸಿ.ಸಿ. ಘಟಕವನ್ನು ಪ್ರಾರಂಭಿಸಲು ಯಮುನಾ ಶ್ರೀನಿಧಿ ಮನವಿ ಸ್ವೀಕರಿಸಿ ಮಾತನಾಡಿ, ನೀವು ನೀಡಿರುವ ಮನವಿಯನ್ನು ಎನ್.ಸಿ.ಸಿ. ಕರ್ನಾಟಕ ಮತ್ತು ಗೋವಾ ಘಟಕಗಳ ಮುಖ್ಯಸ್ಥ ವಿಎಸ್‍ಎಂ ಬಿ.ಎಸ್.ಕನ್ವರ ಅವರಿಗೆ ಮಂಜೂರಾತಿ ಗಾಗಿ ಮಾಹಿತಿ ರವಾನಿಸುತ್ತೇನೆ ಎಂದರು. ಹಿಂದಿನ ಎನ್.ಸಿ.ಸಿ.ಕೆಡೆಟಗಳಾದ ಹರಿಪ್ರಸಾದ ದೇಸಾಯಿ, ಪ್ರತೀಕ ನಾಯ್ಕ ಉಪಸ್ಥಿತರಿದ್ದರು.
ಸನ್ಮಾನ : ಎನ್.ಸಿ.ಸಿ.ಉಡಾನ್ ಕರ್ನಾಟಕ ರಾಜ್ಯಾಧ್ಯಕ್ಷೆ ಯುಮುನಾ ಶ್ರೀನಿಧಿ ಅವರು ಪಟ್ಟಣದ ಪಿ.ಎಂ. ಹೈಸ್ಕೂಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೈಸ್ಕೂಲಿನ ಎನ್.ಸಿ.ಸಿ.ಘಟಕದ ವತಿಯಿಂದ ಅವರಿಗೆ ಸನ್ಮಾನಿ ಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯೋಧ್ಯಾಪಕ ಚಂದ್ರಶೇಖರ ಕಡೇಮನಿ, ಎನ್.ಸಿ.ಸಿ. ಚೀಫ್ ಆಫೀಸರ್ ಜಿ.ಆರ್.ತಾಂಡೇಲ, ಶಿಕ್ಷಕರಾದ ಶೀಲಾ ಬಂಟ, ನಯನಾ ನಾಯಕ, ಜಿ.ಎಸ್.ನಾಯ್ಕ ಎನ್.ಸಿ.ಸಿ.ಉಡಾನ ಉತ್ತರ ಕನ್ನಡದ ಜಿಲ್ಲಾಧ್ಯಕ್ಷ ಪರಿಪ್ರಸಾದ ದೇಸಾಯಿ, ಪ್ರತೀಕ ನಾಯ್ಕ ಮತ್ತು ಸಿಬ್ಬಂದಿ ಗಳು ಉಪಸ್ಥಿತರಿದ್ದರು.