ಡೈಲಿ ವಾರ್ತೆ: 24 ಜುಲೈ 2023

ಬಂಟ್ವಾಳ: ಆಟೋ ರಿಕ್ಷಾಕ್ಕೆ ತ್ಯಾಜ ಸಂಗ್ರಹದ ಘನ ವಾಹನ ಡಿಕ್ಕಿ: ಪ್ರಯಾಣಿಕರಿಗೆ ಗಂಭೀರ ಗಾಯ!

ಬಂಟ್ವಾಳ: ಪುರಸಭೆಯಿಂದ ಬಂಟ್ವಾಳ ಮುಖ್ಯ ರಸ್ತೆಗೆ ಹೊರಟ ಪುರಸಭೆಯ ತ್ಯಾಜ ಸಂಗ್ರಹದ ಘನ ವಾಹನ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಮಹಿಳೆ ಸೇರಿ ಇಬ್ಬರು ಪ್ರಯಾಣಿಕರಿಗೆ ಕಣ್ಣು ಮುಖಕ್ಕೆ ಎದೆಗೆ ಗಂಭೀರ ಗಾಯಗೊಂಡ ಘಟನೆ ಸೋಮವಾರದಂದು ಬಿ.ಸಿ.ರೋಡ್ ನಲ್ಲಿ ನಡೆದಿದೆ.

ಗಾಯಾಳುಗಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಟ್ವಾಳ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.