ಡೈಲಿ ವಾರ್ತೆ:31 ಜುಲೈ 2023
3 ತಿಂಗಳ ಹಿಂದೆ ಮದುವೆಯಾಗಿದ್ದ ನವದಂಪತಿ ಕೃಷಿ ಹೊಂಡಕ್ಕೆ ಹಾರಿ ಸಾವಿಗೆ ಶರಣು!
ಬೆಂಗಳೂರು: ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ನವದಂಪತಿ ಕೃಷಿ ಹೊಂಡಕ್ಕೆ ಬಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೇವನಹಳ್ಳಿ ತಾಲೂಕಿನ ಬಿಜ್ಜವಾರ ಗ್ರಾಮದಲ್ಲಿ ನಡೆದಿದೆ.
ವಿಜಯಪುರ ಪಟ್ಟಣದ ನಿವಾಸಿ ರಮೇಶ್ (28), ಸಹನಾ(26) ಆತ್ಮಹತ್ಯೆಗೆ ಶರಣಾದ ನವದಂಪತಿ. ಪ್ರೀತಿಸಿ ಮನೆಯವರ ವಿರೋಧದ ನಡುವೆ ಮೂರು ತಿಂಗಳಿಂದಷ್ಟೇ ಮದುವೆಯಾಗಿದ್ದ ಈ ಜೋಡಿ, ಪ್ರತ್ಯೇಕ ಮನೆ ಮಾಡಿಕೊಂಡು ವಾಸವಾಗಿದ್ದರು. ಬಾಡಿಗೆ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇಬ್ಬರು, ಎರಡು ದಿನದಿಂದೆ ಬಿಜ್ಜವಾರ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದರು. ಆದರೆ ರಾತ್ರಿ ಮನೆಯಿಂದ ಹೊರಟವರು ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸ್ಥಳೀಯರು ಮತ್ತು ಪೊಲೀಸರು ನೀರಿನಲ್ಲಿದ್ದ ಮೃತದೇಹ ಹೊರತೆಗೆದು ತನಿಖೆ ನಡೆಸಿದ್ದಾರೆ. ವಿಜಯಪುರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.