ಡೈಲಿ ವಾರ್ತೆ:31 ಜುಲೈ 2023

ಅಂತರ್ ರಾಷ್ಟ್ರೀಯ ಮಟ್ಟದ  ಅಭಾಕಸ್ ಮತ್ತು ಮೆಂಟಲ್ ಅರ್ಥಮೇಟಿಕ್ ಕಾಂಪಿಟಿಷನ್ ನಲ್ಲಿ ಬೆಳ್ಳಿ ಪದಕ ಗೆದ್ದ ಕೋಟದ ಕುವರ ಆದಿತ್ಯ ಆರ್.

ಕೋಟ: ಐಡಿಯಲ್ ಪ್ಲೇ ಅಭಾಕಸ್ ಅಂತರ್ ರಾಷ್ಟ್ರೀಯ ಮಟ್ಟದ  ಅಭಾಕಸ್ ಮತ್ತು ಮೆಂಟಲ್ ಅರ್ಥಮೇಟಿಕ್ ಕಾಂಪಿಟಿಷನ್ ‘world city cup-23’  ಜುಲೈ30 ರಂದು ಭಾನುವಾರ ತಮಿಳುನಾಡಿನ  ಮಹಾಬಲಿಪುರಂ ನಲ್ಲಿ ನಡೆಯಿತು.

ಸುಮಾರು19 ದೇಶಗಳಿಂದ 3000 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ  ಕೋಟ ಎಜ್ಯೂಕೇರ್   ಅಭಾಕಸ್ ಸೆಂಟರ್ ವತಿಯಿಂದ ಪ್ರತಿನಿದಿಸಿದ  ಆದಿತ್ಯ ಆರ್. ಕೋಟ ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪಡೆದು  ನಾಡಿಗೆ ಕೀರ್ತಿ ತಂದಿದ್ದಾರೆ.

ಇವರು ಕೋಟ ದೀಪಿಕಾ ಆರ್ ಮತ್ತು ಜಿ. ಎ. ರವಿ ಅವರ ಪ್ರಥಮ ಪುತ್ರ. ಪ್ರಸನ್ನ ಕೆ ಬಿ ಹಾಗೂ ಸುಪ್ರೀತಾ ಮೊಗವೀರ್ ಇವರು ತರಬೇತುದಾರರಾಗಿದ್ದಾರೆ ಎಂದು ಕೋಟ ಎಜ್ಯುಕೇರ್ ಸಂಸ್ಥೆ ಸ್ಥಾಪಕ ಅಧ್ಯಕ್ಷರಾದ ಚೇತನ ಎಂ ತಿಳಿಸಿರುತ್ತಾರೆ.