ಡೈಲಿ ವಾರ್ತೆ: 31 ಜುಲೈ 2023

ವರದಿ: ವಿದ್ಯಾಧರ ಮೊರಬಾ

ಅಂಕೋಲಾದಲ್ಲಿ ಲಕ್ಷ ಗಿಡ ನೆಡುವ ಕಾರ್ಯಕ್ರಮಕ್ಕೆ ಪದ್ಮಶ್ರೀ ಸುಕ್ರಿ ಗೌಡರಿಂದ ಚಾಲನೆ

ಅಂಕೋಲಾ : ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿ ಕನಿಷ್ಟ ಒಂದಾದರೂ ಗಿಡವನ್ನು ನೆಡುವಂತಾ ಗಬೇಕು. ಒಂದು ಲಕ್ಷ ಗಿಡ ನೆಡುವ ಅಭಿಯಾನಕ್ಕೆ ತಾಲೂಕಿನಲ್ಲಿ ನಾನು ಖುಷಿಯಿಂದಲೇ ಚಾಲನೆ ನೀಡಿ ದ್ದೇನೆ ಇದನ್ನು ವಿದ್ಯಾರ್ಥಿಗಳು ಕೂಡ ಮುಂದುವರೆಸಿಕೊಂಡು ಹೋಗಬೇಕು ಪದ್ಮಶ್ರೀ ಸುಕ್ರಿ ಗೌಡ ಹೇಳಿದರು.

ತಾಲೂಕಿನ ತೆಂಕಣಕೇರಿಯ ಆದರ್ಶ ಪ್ರೌಢಶಾಲೆಯ ಆವರಣದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಎ.ರವೀಂದ್ರ ನಾಯ್ಕ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡ ಒಂದು ಲಕ್ಷ ಗಿಡ ನೆಡುವ ಅಭಿಯಾನದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಆದರ್ಶ ಪ್ರೌಢಶಾಲೆಯ ಮುಖ್ಯೋಧ್ಯಾಪಕ ನಿತ್ಯಾನಂದ ನಾಯ್ಕ ಮಾತನಾಡಿ, ನಾವು-ನಿವೆಲ್ಲರು ಪರಿಸ ರಕ್ಕೆ ಅನುಗುಣವಾಗಿ ಜೀವನ ನಡೆಸುತ್ತಾ ಇದ್ದೇವೆ. ಆದರೆ ವಿದ್ಯಾರ್ಥಿಗಳು ತಮ್ಮ ಹುಟ್ಟುಹಬ್ಬ ದಿನದೆಂದು ಗಿಡ ನೆಡುವುದರ ಮೂಲಕ ಪರಿಸರದ ಬಗ್ಗೆ ಕಾಳಜಿ ವಹಿಸುವುದಕ್ಕೆ ಸುಕ್ರಿಜ್ಜಿಯವರು ಮಾದರಿ ಎಂದರು.
ಅರಣ್ಯಭೂಮಿ ಹಕ್ಕು ಹೋರಾಟ ಸಮಿತಿಯ ಉಮೇಶ ಎನ್.ನಾಯ್ಕ, ರಾಜೇಶ ಎಂ. ನಾಯ್ಕ ಸುಕ್ರಿ ಗೌಡರಿಗೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ದೇವಿಯಾನಿ ನಾಯಕ, ರಂಜನಿ ನಾಯ್ಕ, ಭಾರತಿ ನಾಯ್ಕ, ಮಧುಕೇಶ್ವರ ನಾಯ್ಕ, ನವೀನ ನಾಯ್ಕ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.