ಡೈಲಿ ವಾರ್ತೆ:12 ಆಗಸ್ಟ್ 2023

ಕಳ್ಳತನ ಪ್ರಕರಣದ ಆರೋಪಿಯನ್ನು
ಬಂಧಿಸಲು ಹೋದ ಪೊಲೀಸ್ ಕಾನ್‌ಸ್ಟೇಬಲ್ ಗೆ ಚಾಕುವಿನಿಂದ ಹಲ್ಲೆ: ಆರೋಪಿ ಎಸ್ಕೆಪ್.!

ಕಲಬುರಗಿ : ಕಲಬುರಗಿಯ ರಾಘವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲು ಹೋಗಿದ್ದ ವೇಳೆ ಪೊಲೀಸ್ ಕಾನಸ್ಟೇಬಲ್‌ಗಳ ಮೇಲೆ ಚಾಕುವಿನಿಂದ ಹಲ್ಲೆಗೈದು ಪರಾರಿಯಾದ ಘಟನೆ ನಡೆದಿದೆ.

ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹ್ಮದ್ ಇಮ್ರಾನ್ ಪಾಶಾ ಎಂಬಾತನನ್ನು ಬಂಧಿಸಲು ಆತನ ಮನೆಗೆ ಹೋಗಿದ್ದರು.

ರಾಘವೇಂದ್ರ ನಗರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಮುಜಾಹಿದ್ ಕೋತ್ವಾಲ್ ಮತ್ತು ಉಮೇಶ್ ತೆರಳಿದ್ದರು. ಎಂದು ತಿಳಿದುಬಂದಿದೆ.
ಪೊಲೀಸರನ್ನು ಕಂಡು ಎಸ್ಕೆಪ್ ಆಗಲು ಯತ್ನಿಸಿದ ಮಹ್ಮದ್ ಇಮ್ರಾನ್‌ನನ್ನು ಹಿಡಿಯುವಾಗ ಚಾಕುವಿನಿಂದ ಮುಜಾಹಿದ್ ಕೋತ್ವಾಲ್ ಅವರ ತಲೆಗೆ ಹೊಡೆದು ಪರಾರಿಯಾಗಿದ್ದಾನೆಂದು ಆರೋಪಿಸಲಾಗಿದೆ.

ಸದ್ಯ ಮುಜಾಹಿದ್ ಕೋತ್ವಾಲ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ