ಡೈಲಿ ವಾರ್ತೆ:19 ಆಗಸ್ಟ್ 2023
ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು.!
ಅರೋಗ್ಯ: ಜೀರಿಗೆ ಎಲ್ಲರ ಅಡುಗೆ ಮನೆಯಲ್ಲಿ ಸಿಗುವ ಸಣ್ಣ ಕಾಳಿನ ಮಸಾಲೆ ಪದಾರ್ಥ. ಆದರೆ ಅದರ ಪ್ರಯೋಜನಗಳು ಮಾತ್ರ ದೊಡ್ಡವೇ. ನಿತ್ಯ ಆಹಾರದಲ್ಲಿ ಬಳಕೆ ಮಾಡುವ ಜೀರಿಗೆ ಆರೋಗ್ಯಕ್ಕೆ ಹತ್ತು ಹಲವು ರೀತಿಯಲ್ಲಿ ಉಪಯುಕ್ತವಾದ ಪದಾರ್ಥ. ಇನ್ನೂ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಲಾಭವಿದೆ.
ಜೀರಿಗೆ ನೀರಿನ ಪ್ರಯೋಜನಗಳು :
1) ಜೀರಿಗೆಯಲ್ಲಿ ವಿಟಮಿನ್ ಹಾಗೂ ಪ್ರಮುಖ ಪೋಷಕಾಂಶಗಳಿವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಚಯಾಪಚಯ ದರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೀರಿಗೆ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆನ್ನೀಸಿಯಮ್ ನಂತಹ ಖನಿಜಗಳನ್ನು ಹೊಂದಿರುತ್ತದೆ.
2) ಪ್ರತಿದಿನ ಜೀರಿಗೆ ನೀರನ್ನು ಕುಡಿಯುವುದರಿಂದ ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿದೆ. ಹಾಗಾಗಿ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
3) ಜೀರಿಗೆ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
4) ಜೀರಿಗೆ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನಿಸಿಯಮ್ ನಂತಹ ಖನಿಜಗಳನ್ನು ಹೊಂದಿರುತ್ತದೆ. ಮೂಳೆಗಳ ಆರೋಗ್ಯವನ್ನು ಸುಧಾರಿಸಲು ಮತ್ತು ನರಗಳ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
5) ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ಜೀರಿಗೆ ನೀರು ಜೀರ್ಣಾಂಗ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ.
6) ಜೀರಿಗೆ ನೀರು ತೂಕ ಇಳಿಸಲು ಸಹಾಯ ಮಾಡುತ್ತದೆ.
7) ನಿಮಗೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಜೀರಿಗೆ ನೀರನ್ನು ಸೇವಿಸಿ. ಇದು ಕೂದಲನ್ನು ಬಲಪಡಿಸುತ್ತದೆ.
8) ಕೊಲೆಸ್ಟ್ರಾಲ್ ಸಮಸ್ಯೆಯನ್ನು ನಿವಾರಿಸಲು ಜೀರಿಗೆ ಕಷಾಯವನ್ನು ಸೇವಿಸಿ. ಇದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸುತ್ತದೆ.
ಜೀರಿಗೆ ನೀರು ಮಾಡುವ ವಿಧಾನ: ಮೊದಲು, ಒಂದು ಬೌಲ್ ನೀರಿನಲ್ಲಿ ಒಂದು ಚಮಚ ಜೀರಿಗೆಯನ್ನು ನೆನೆಸಿಡಿ. ಮರುದಿನ ಬೆಳಿಗ್ಗೆ ನೀವು ಈ ನೀರನ್ನು ನೇರವಾಗಿ ಕುಡಿಯಬಹುದು ಅಥವಾ 5-6 ನಿಮಿಷಗಳ ಕಾಲ ಕುದಿಸಿ ಕುಡಿಯಬಹುದು.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.