ಡೈಲಿ ವಾರ್ತೆ:19 ಆಗಸ್ಟ್ 2023

ದಕ್ಷಿಣ ಕನ್ನಡ: ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಮಂಗಳೂರು:ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ದಂಧೆ ನಡೆಸುತ್ತಿರುವ ಆರೋಪದಲ್ಲಿ ಉರ್ವ ಪೊಲೀಸರು ಶುಕ್ರವಾರ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ನಗರದ ಚಿಲಿಂಬಿಯ ಗೋಕುಲದಾಸ ಶೆಣೈ ಹಾಗೂ ಕೋಡಿಕಲ್ ನಿವಾಸಿ ದೀಪಕ್ ಶೆಟ್ಟಿ ಬಂಧಿತರು ಎಂದು ತಿಳಿದುಬಂದಿದೆ.

ಇವರು ನಗರದ ಉರ್ವಸ್ಟೋರ್ ಮೈದಾನದ ಬಳಿಯ ದಿನಸಿ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದರು.
ಮಟ್ಕಾ ದಂಧೆಗೆ ಬಳಸಿದ್ದ 4,24,490 ಲಕ್ಷ ರೂ. ನಗದು, ಹಾಗೂ ಮೊಬೈಲ್ ಫೋನ್ ಮತ್ತು ಮಟ್ಕಾ ಬರೆದಿದ್ದ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.