ಡೈಲಿ ವಾರ್ತೆ:22 ಆಗಸ್ಟ್ 2023

ಸೌಜನ್ಯ ಪ್ರಕರಣ – ನ್ಯಾಯ ಕೋರಿ ಕೋಟಿಲಿಂಗೇಶ್ವರನಿಗೆ ಪ್ರಾರ್ಥನೆ

ಕುಂದಾಪುರ: ಸೌಜನ್ಯ ಪ್ರಕರಣದಲ್ಲಿ ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧದ ಅಪಪ್ರಚಾರ ಮುಕ್ತಾಯಗೊಳ್ಳಲಿ ಎಂಬ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕ್ಷೇತ್ರದ ಭಕ್ತರು ಮಂಗಳವಾರ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ ಹಾಗೂ ಶ್ರೀ ಮೂಲೆ ಗಣಪತಿ ದೇವರಿಗೆ ಹಣ್ಣು ಕಾಯಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಭಕ್ತರು, ಊರಿನ ಗಣ್ಯರಾದ ಸುಬ್ರಹ್ಮಣ್ಯ ಶೆಟ್ಟಿ, ಜನಜಾಗೃತಿ ವೇದಿಕೆ ಸದಸ್ಯರು, ರಾಜಗೋಪಾಲ ಆಚಾರ್ಯ, ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು, ಪಂಚಾಯತ್ ಅಧ್ಯಕ್ಷೆ ರಾಗಿಣಿ, ರಾಮಚಂದ್ರ, ಸುಶೀಲ್ ಬಸವರಾಜ್ ಬಗೇರ, ಪ್ರೇಮಾ, ಶ್ರೀಧರ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.