ಡೈಲಿ ವಾರ್ತೆ:23 ಸೆಪ್ಟೆಂಬರ್ 2023
ಚೈತ್ರಾ ಕುಂದಾಪುರ ಸೇರಿ 7 ಆರೋಪಿಗಳಿಗೆ ಅ.6 ರ ವರೆಗೆ ನ್ಯಾಯಾಂಗ ಬಂಧನ
ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ವಂಚಿಸಿರುವ ಆರೋಪ ಎದುರಿಸುತ್ತಿರುವ ಚೈತ್ರಾ ಕುಂದಾಪುರ ಸೇರಿದಂತೆ 7 ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ 3ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಚೈತ್ರಾ ಮತ್ತು ಗ್ಯಾಂಗ್ ಅನ್ನು ಸಿಸಿಬಿ ಇಂದು (ಶನಿವಾರ) ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಈ ವೇಳೆ ವಕೀಲರ ಬದಲಾವಣೆಗೆ ಚೈತ್ರಾ ಮನವಿ ಮಾಡಿಕೊಂಡರು. ಅಲ್ಲದೇ ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದರು.
ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಚೈತ್ರಾ ಸೇರಿದಂತೆ ಗಗನ್ ಕಡೂರ್, ಪ್ರಜ್ವಲ್, ರಮೇಶ್, ಚೆನ್ನನಾಯ್ಕ್, ಧನರಾಜ್, ಶ್ರೀಕಾಂತ್ ಆರೋಪಿಗಳನ್ನು ಅ.6 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.
ಆರೋಪಿಗಳಾದ ರಮೇಶ್, ಚನ್ನನಾಯ್ಕ್ ಮತ್ತು ಧನರಾಜ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಸೆ.26ಕ್ಕೆ ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಟರ್‌ಗೆ ಕೋರ್ಟ್ ಸೂಚನೆ ನೀಡಿದೆ. ವಿಚಾರಣೆಯನ್ನು ಸೆ.26 ಕ್ಕೆ ಮುಂದೂಡಿದೆ.