ಡೈಲಿ ವಾರ್ತೆ: 19/OCT/2023
ಬೆಂಗಳೂರು ಮೂಲದ ಮಧ್ಯ ವಯಸ್ಸಿನ ಜೋಡಿ ಶವ: ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಪತ್ತೆ – ಆತ್ಮಹತ್ಯೆ ಶಂಕೆ.!
ಮಂಗಳೂರು: ಪಣಂಬೂರು ಬೀಚ್‌ನಲ್ಲಿ ಜೋಡಿ ಶವ ಪತ್ತೆಯಾದ ಘಟನೆ ನಡೆದಿದ್ದು, ಮಧ್ಯ ವಯಸ್ಸಿನ ಗಂಡಸು ಮತ್ತು ಮಹಿಳೆ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.
ಮೃತರನ್ನು ಲಕ್ಷ್ಮಿ(40) ಮತ್ತು ಬೋರಲಿಂಗಯ್ಯ (45) ಎಂದು ಗುರುತ್ತಿಸಲಾಗಿದ್ದು, ಇವರು ಬೆಂಗಳೂರು ಮೂಲದವರು ಎನ್ನಲಾಗಿದೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ.
ಬೆಂಗಳೂರು ಮೂಲದವರಾದ ಲಕ್ಷ್ಮಿ ಮತ್ತು ಬೋರಲಿಂಗಯ್ಯ ನಿನ್ನೆ ಬೆಂಗಳೂರಿನಿಂದ ಆಗಮಿಸಿದ್ದು, ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಪಣಂಬೂರಿಗೆ ಬಂದು ಸಮುದ್ರಕ್ಕೆ ಧುಮುಕಿದ್ದಾರೆ ಎನ್ನಲಾಗಿದೆ. ಸಮುದ್ರಕ್ಕೆ ಹಾರುವ ಮುಂಚೆ ತಮ್ಮ ಮೋಬೈಲ್ ಮತ್ತಿರ ಸೊತ್ತುಗಳನ್ನು ತೀರದಲ್ಲೇ ಬಿಟ್ಟಿದ್ದರಿಂದ ಪೊಲೀಸರು ಸಂಬಂಧಿಕರನ್ನು ಸಂರ‍್ಕಿಸಿ ಮಾಹಿತಿ ನೀಡಿದ್ದಾರೆ. ಇಬ್ಬರ ಶವಗಳನ್ನು ಸ್ಥಳೀಯರ ಸಹಕಾರದಿಂದ ಮೇಲೆತ್ತಿ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. ಪಣಂಬೂರು ಪೊಲೀಸರು ಈ ಬಗ್ಗೆ ತನಿಖೆ ನಡಸುತ್ತಿದ್ದಾರೆ.