ಡೈಲಿ ವಾರ್ತೆ: 30/OCT/2023

ಫೆ. 01, 02 ಹಾಗೂ 03 ರಂದು ಕೋಟ ಪಡುಕರೆಯಲ್ಲಿ ಬೃಹತ್ ರಿಫಾಯಿಯ್ಯಾ ದಫ್ ರಾತೀಬ್ ಹಾಗೂ ಮಹ್ಲರತುಲ್ ಬದ್ರಿಯಾ ಕಾರ್ಯಕ್ರಮ

ಕೋಟ: ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್(SSF) ಹಾಗೂ ರಿಫಾಯಿಯ್ಯಾ ದಫ್ ಕಮಿಟಿ(RDC) ಕೋಟ ಪಡುಕರೆ ಇದರ ಆಶ್ರಯದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವಂತಹ ಬ್ರಹತ್ ರಿಫಾಯಿಯ್ಯಾ ದಫ್ ರಾತೀಬ್ ಇದರ 27ನೇ ವಾರ್ಷಿಕೋತ್ಸವ ಹಾಗೂ ಮಹ್ಲರತುಲ್ ಬದ್ರಿಯಾ, ಧಾರ್ಮಿಕ ಪ್ರವಚನ ಮತ್ತು ಗ್ರ್ಯಾಂಡ್ ಬುರ್ದಾ ಮಜ್ಲಿಸ್ *2024 ಫೆಬ್ರವರಿ 01,02,03 ಗುರು,ಶುಕ್ರ,ಶನಿವಾರ* ದಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.