ಡೈಲಿ ವಾರ್ತೆ: 31/DEC/2023
ವರದಿ: ವಿದ್ಯಾಧರ ಮೊರಬಾ
ಶಿಕ್ಷಣದಲ್ಲಿ ಪ್ರಗತಿ ಹೊಂದಿದ್ದರೆ ವೃತ್ತಿಯಲ್ಲಿ ಬದಲಾವಣೆ ಸಾಧ್ಯ: ಸಚಿವ ಮಂಕಾಳು
ಅಂಕೋಲಾ : ಮೀನುಗಾರರಿಗೆ ಜನ್ಮದಿಂದಲೇ ಮೀನುಗಾರಿಕೆ ಉದ್ಯೋಗ ಪ್ರಾಪ್ತವಾಗುತ್ತದೆ. ಆದರೂ ಮೀನುಗಾರರಲ್ಲಿ ಹಣ ಇಲ್ಲ. ಮೀನುಗಾರರು ಕೇವಲ ಮೀನುಗಾರಿಕೆಗೆ ಸೀಮಿತವಾಗಿರದೆ, ಶಿಕ್ಷಣದ ಮೂಲಕ ಎಲ್ಲ ಕ್ಷೇತ್ರದಲ್ಲಿಯೂ ಪ್ರಗತಿ ಹೊಂದಿದ್ದರೆ ಮಾತ್ರ ವೃತ್ತಿಯಲ್ಲಿ ಬದಲಾವಣೆ ಸಾಧ್ಯ ಎಂದು ಮೀನುಗಾರಿಕೆ ಮತ್ತು ಉ.ಕ.ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.
ಉತ್ತರ ಕನ್ನಡ ಜಿಲ್ಲಾ ಹರಿಕಂತ್ರ ಮಹಾಜನ ಸಂಘ (ನಿ) ಕಾರವಾರ ಮತ್ತು ಅಂಕೋಲಾ ತಾಲೂಕಾ ಹರಿ ಕಂತ್ರ ಮಹಾಜನ ಸಂಘದವರು ಇಲ್ಲಿನ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಭಾನುವಾರ ಆಯೋಜಿಸಿದ 18ನೇ ವರ್ಷದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಪ್ರತಿಭಾವಂತರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದು ಅತ್ಯಾವಶ್ಯ. ಪ್ರತಿಭಾ ಪುರ ಸ್ಕಾರ ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಸ್ಥಾನಗಳಿಸಿದ ಬಳಿಕ ತಮಗೆ ನೆರವು ನೀಡಿದ ಸಮಾ ಜದ ಋಣ ತೀರಿಸಬೇಕು ಎಂದರು.
ಕಾರವಾರ-ಅಂಕೋಲಾ ಕ್ಷೇತ್ರ ಶಾಸಕ ಸತೀಶ ಕೆ.ಸೈಲ್ ಮಾತನಾಡಿ, ಹರಿಕಂತ್ರ ಸಮಾಜವು ಶೈಕ್ಷಣ ಕವಾಗಿ ಅಭಿವೃದ್ಧಿಯಾಗಬೇಕಾದರೆ ಪಾಲಕರು ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಸಮಾಜದ ಪ್ರಮುಖರು ಸಹ ಪ್ರತಿಭಾವಂತರನ್ನು ಗುರುತಿಸಿ ಆರ್ಥಿಕವಾಗಿ ಸಹಕರಿಸಿಬೇಕು ಎಂದರು.
ಉ.ಕ.ಜಿಲ್ಲಾ ಹರಿಕಂತ್ರ ಮಹಾಜನ ಸಂಘದ ಗೌರವಾಧ್ಯಕ್ಷ ಗಣಪತಿ ಆರ್.ಮಾಂಗ್ರೆ ಮಾತನಾಡಿ, ನಮ್ಮ ಸಮೂದಾಯದವರು ಅಕ್ಷರಕ್ರಾಂತಿ ಮಾಡಿಬೇಕಾದರೆ ಉನ್ನತ ಮಟ್ಟದ ಶಿಕ್ಷಣ ನೀಡುವಲ್ಲಿ ತಂದೆ-ತಾಯಿ ಅವರ ಪಾತ್ರ ಬಹಳ ದೊಡ್ಡದು. ಈಗ ನೋಡಿದರೆ ಈ ಹಿಂದಿನಂತೆ ನಮ್ಮಲ್ಲಿ ಶೇ.95 ಹೆಚ್ಚು ಅಂಕ ಪಡೆ ಯುವ ಪ್ರತಿಭಾವಂತ ಮಕ್ಕಳನ್ನು ಕಾಣಬಹುದಾಗಿದೆ. ಇದಕ್ಕೆಲ್ಲಾ ನಮ್ಮ ಹರಿಕಂತ್ರ ಮಹಾಜನ ಸಂಘವು ಕಳೆದ 18 ವರ್ಷದಿಂದ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಾ ಬಂದಿದೆ ಎಂದರು.
ವಿಪ ಸದಸ್ಯ ಗಣಪತಿ ಡಿ. ಉಳ್ವೇಕರ್, ಉ.ಕ.ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್, ಬೆಂಗಳೂರು ಶಾಂತಿ ಹಾಸ್ಪಿಟಲ್ ಸೆಂಟರ್‍ನ ಮುಖ್ಯ ಔಷಧಿ ವಿತಕರ ಸುಭಾಷ ಪಿ. ಕೇಣ ಕರ್ ಸೇರಿದಂತೆ ಹಲವರು ಮಾತನಾಡಿದರು.
ಹರಿಕಂತ್ರ ಮಹಾಜನ ಸಂಘದ ವಿವಿಧ ತಾಲೂಕಾ ಅಧ್ಯಕ್ಷರಾದ ಹೂವಾ ಖಂಡೇಕರ್, ಜಗದೀಶ ಹರಿ ಕಂತ್ರ ನುಶಿಕೋಟೆ, ರಾಘು ಹರಿಕಾಂತ ಭಟ್ಕಳ, ಸುರೇಶ ಹರಿಕಂತ್ರ ಹೊನ್ನಾವರ, ಜಿಲ್ಲಾ ಸಂಘದ ಉಪಾಧ್ಯಕ್ಷ ಆರ್.ಎಸ್.ಆಂದ್ಲೆಮನೆ, ಕಾರ್ಯದರ್ಶಿ ಶ್ರೀಕಾಂತ ದುರ್ಗೇಕರ್, ಈಶ್ವರ ಹರಿಕಂತ್ರ, ಪ್ರಮುಖ ರಾದ ಡಾ.ವೆಂಕಟೇಶ ಕೇಣ ಕರ್, ಪಾಂಡುರಂಗ ಕೇಣ ಕರ, ರಾಜು ಟಿ.ಹರಿಕಂತ್ರ, ಸಂಜೀವ ಬಲೇಗಾರ, ವೆಂಕಟೇಶ ದುರ್ಗೇಕರ್, ರತ್ನಾಕರ ಹರಿಕಂತ್ರ, ಶಾಂತಾ ಹರಿಕಂತ್ರ, ರಮೇಶ ಹನುಮಟ್ಟಿಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಾರಿಕಾ ಸಂಗಡಿಗರು ಪ್ರಾರ್ಥಿಸಿದರು. ಶೈಕ್ಷಣ ಕ ಸಮಿತಿಯ ಅಧ್ಯಕ್ಷ ಶಿವಾನಂದ ತಾಂಡೇಲ್, ಪ್ರಧಾನ ಕಾರ್ಯದರ್ಶಿ ಟಿ.ಬಿ.ಹರಿಕಾಂತ ನಿರ್ವ ಹಿಸಿದರು. ಎಸ್.ಎಸ್.ಎಲ್.ಸಿ., ಪಿಯುಸಿ, ಪದವಿಯಲ್ಲಿ ಉತ್ತಮ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪರುಸ್ಕಾರ ವಿತರಿಸಲಾಯಿತು.
ಸನ್ಮಾನ : ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ ಸೈಲ್, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಂಕರ ಹರಿಕಂತ್ರ, ವಕೀಲರಾದ ರಾಜು ಹರಿಕಂತ್ರ ರಾಮನಗುಳಿ, ಮಹೇಶ ಹರಿಕಂತ್ರ, ಅಶೋಕ ಹರಿಕಂತ್ರ, ಮೀನಾಕ್ಷಿ ದುರ್ಗೇಕರ್, ಉದ್ಯಮಿ ಗಣೇಶ ಹರಿಕಂತ್ರ ಮುರ್ಡೇಶ್ವರ, ಹೆಸ್ಕಾಂ ಇಲಾಖೆಯ ಗಿರಿಧರ ಹರಿಕಂತ್ರ, ಆರಕ್ಷಕ ಬಾಬು ಎಂ. ಕೇಣ ಕರ, ವಿಜಯಕರ್ನಾಟಕ ಪತ್ರಿಕೆಯ ಜಿಲ್ಲಾ ವರದಿಗಾರ ಪ್ರಮೋದ ಹರಿಕಂತ್ರ, ಗ್ರಾಪಂ.ಅಧ್ಯಕ್ಷರಾದ ಸಂತೋಷ ಹನುಮಟ್ಟೇಕರ್ ಹಾರವಾಡ, ಲಕ್ಷ್ಮೀ ರತ್ನಾಕರ ಹರಿಕಂತ್ರ ಶೆಟಗೇರಿ, ಮಹಾಂತೇಶ ನಾಗೇಶ ಹರಿಕಂತ್ರ ಹೊಲನಗದ್ದೆ(ಕುಮಟಾ), ವೀಣಾ ದೇವರಾಯ ದುರ್ಗೇಕರ್ ಕುಮಟಾ ದೇವಗಿರಿ, ಸಂತೋಷ ಸುಬ್ರಾಯ ಹರಿಕಂತ್ರ ಬರ್ಗಿ, ಕಲಾವತಿ ಯಾದೋಬಾ ದುರ್ಗೇಕರ ಅಮದಳ್ಳಿ, ಶ್ವೇತಾ ಉಮೇಶ ಹರಿಕಂತ್ರ ಕಿಮಾನಿ, ಸುಬ್ರಹ್ಮಣ್ಯ ಹರಿಕಂತ್ರ ಸಿಎಸ್‍ಪಿ ಕುಮಟಾ, ಕಾವ್ಯಾ ರಮೇಶ ಕಿಮಾನಿಕರ್, ವಿನಯಾ ಹರಿಶ್ವಂದ್ರ ಹರಿಕಾಂತ ಎಸ್‍ಡಿಎ ಕ್ಷೇತ್ರ ಶಿಕ್ಷಣ ಕಾರ್ಯಾಲಯ ಮಂಗಳೂರು ಇವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.