ಡೈಲಿ ವಾರ್ತೆ: 05/JAN/2024
ವರದಿ: ವಿದ್ಯಾಧರ ಮೊರಬಾ
ಜ.6 ರಂದು ಕೆ.ಎಸ್.ಹೆಗ್ಡೆ ಆಸ್ಪತ್ರೆ ಮಂಗಳೂರು, ಕದಂಬ ಫೌಂಡೇಶನ್ ಶಿರಸಿ ವತಿಯಿಂದ ರಾಮನಗುಳಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಅಂಕೋಲಾ : ಕೆ.ಎಸ್.ಹೆಗ್ಡೆ ಆಸ್ಪತ್ರೆ ಮಂಗಳೂರು, ಕದಂಬ ಫೌಂಡೇಶನ್ ಶಿರಸಿ, ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘ ರಾಮನಗುಳಿಯಲ್ಲಿ ಜ.6 ಶನಿವಾರ ಬೆಳಿಗ್ಗೆ 10 ರಿಂದ 2 ಗಂಟೆ ಮತ್ತು ಜ.7 ಭಾನುವಾರ ಬೆಳಿಗ್ಗೆ 9 ರಿಂದ 1 ಗಂಟೆ ಯವರಿಗೆ ಗ್ರಾಮ ಪಂಚಾಯತ ಬೇಲೆಕೇರಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಬೆಳೆಗಾರರ ಸಮಿತಿಯ ಕಾರ್ಯದರ್ಶಿ ರಾಮಚಂದ್ರ ಹೆಗಡೆ ಹೇಳಿದರು.
ಪಟ್ಟಣದ ಖಾಸಗಿ ಹೊಟೇಲ್‍ನಲ್ಲಿ ಗುರುವಾರ ಸಂಜೆ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ, ಕೆ.ಎಸ್.ಹೆಗ್ಡೆಯ ಆಸ್ಪತ್ರೆಯ ನುರಿತ ವೈದ್ಯರಾದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಅನುಶ್ರೀ ಬಳ್ಳಾಲ್, ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ಕೆ.ಪಿ.ಅಭಿಷೇಕ ಭಟ್, ಎಲುಬು ಮತ್ತು ಕೀಲು ತಜ್ಞರಾದ ಡಾ.ಶುಶೀಲ್ ಚುಗ್ಹ್, ವೈದ್ಯಕೀಯ ತಜ್ಞರಾದ ಡಾ.ರೋಹಿತ್ ಕೃಷ್ಣನ್ ಆಗಮಿಸಲಿದ್ದಾರೆ. ಶಿಬಿರದಲ್ಲಿ ವೈದ್ಯರು ಸೂಚಿದವರಿಗೆ ರಕ್ತದ ಒತ್ತಡ ಮತ್ತು ಮಧುಮೇಹ ಪರೀಕ್ಷೆ ಹಾಗೂ ಇ.ಸಿ.ಜಿ. ಪರೀಕ್ಷೆಗಳನ್ನು ಮತ್ತು ಸಾಮಾನ್ಯ ಔಷಧಿ ಗಳನ್ನು ಉಚಿತವಾಗಿ ನೀಡಲಾಗುವುದು.
ಶಿಬಿರದಲ್ಲಿ ವೈದ್ಯಕೀಯ ಚಿಕಿತ್ಸೆ, ಶ್ವಾಸಕೋಶ ಸಂಬಂಧಿ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಹೃದಯ ಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸೆ, ಎಲುಬು ಮತ್ತು ಕೀಲು ಮತ್ತು ಚರ್ಮರೋಗ ಚಿಕಿತ್ಸೆ ಸೇರಿದಂತೆ ಆರೋಗ್ಯ ಸಂಬಂಧಿಸಿದ ತಪಾಸಣೆ ನಡೆಸಲಾಗುವುದು. ಕ್ಷೇಮ ಹೆಲ್ತ್ ಕಾರ್ಡ್ ನೋಂದಾವಣೆ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ತಾಪಂ.ಮಾಜಿ ಸದಸ್ಯ ಸಂಜೀವ ಕುಚನಾಡು, ಬೇಲೇಕೇರಿ ಗ್ರಾಪಂ. ಉಪಾಧ್ಯಕ್ಷ ರಾಜೇಶ ಆರ್.ನಾಯಕ ಉಪಸ್ಥಿತರಿದ್ದರು.