ಡೈಲಿ ವಾರ್ತೆ: 07/JAN/2024

ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೇರಣೆ, ಸ್ಮರಣೆ, ವೃತ್ತಿ ಮಾರ್ಗದರ್ಶನ ಮತ್ತು ಅದ್ಯಾಯನ ಕೌಶಲ್ಯ ಕಾರ್ಯಾಗಾರ

ಕುಂದಾಪುರ: ವಿದ್ಯಾರ್ಥಿಗಳು ದೇಶದ ಭವಿಷ್ಯದ ಅಮೂಲ್ಯ ಆಸ್ತಿಯಾಗಿದ್ದಾರೆ, ಅವರಿಗೆ ಸರಿಯಾದ ರೀತಿಯಲ್ಲಿ ಶಿಕ್ಷಣ ಹಾಗು ಮಾರ್ಗದರ್ಶನ ನೀಡಿದರೆ ಸಮಾಜದ ಕಲ್ಯಾಣ ಸಾಧ್ಯ.
ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೆ ತಮ್ಮ ಬದುಕಿಗೊಂದು ಸ್ಪಷ್ಟ ಉದ್ದೇಶ ಇಟ್ಟುಕೊಂಡು ಮುನ್ನಡೆಯಬೇಕಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ವವಾಗಿದೆ ಎಂದು ಎನ್.ಎನ್.ಒ ಕಮ್ಯುನಿಟಿ ಸೆಂಟರ್ ಕುಂದಾಪುರ ಆಯೋಜಿಸಿದ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೇರಣೆ, ಸ್ಮರಣೆ, ವೃತ್ತಿ ಮಾರ್ಗದರ್ಶನ ಮತ್ತು ಅದ್ಯಾಯನ ಕೌಶಲ್ಯ ಕಾರ್ಯಾಗಾರದ ಉದ್ಘಾಟನೆ ನೆರೆವೇರಿಸಿ ಬ್ಯಾರೀಸ್ ಕಾಲೇಜ್ ಕೊಡಿಯ ಪ್ರಾಂಶುಪಾಲರಾದ ಡಾ ಶಮೀರ್ ಮಾತನಾಡಿದರು.

ಎನ್ಎನ್ಒ ಉಡುಪಿ ಜಿಲ್ಲಾ ಘಟಕದ ಸಂಚಾಲಕರಾದ ಶೈಖ್ ವಾಹಿದ್ ಉದ್ಯಾವರ ಮಾತನಾಡಿ ಹಲವಾರು ವಿದ್ಯಾರ್ಥಿಗಳು ಪಿಯುಸಿ ನಂತರ ಏನು ಮಾಡಬೇಕು ಅಂತ ಗೊಂದಲದಲ್ಲಿ ಇರುತ್ತಾರೆ ಇಂಥ ಸಂದರ್ಭದಲ್ಲಿ ಅವರಿಗೆ ಸರಿಯಾದ ಸಮಯದಲ್ಲಿ ಒಳ್ಳೆಯ ತರಬೇತಿಯ ಮೂಲಕ ಮಾರ್ಗದರ್ಶನ ನೀಡಬೇಕು. ಇದರಿಂದ ಅವರಿಗೆ ಇಷ್ಟವಾದ ಸಬ್ಜೆಕ್ಟ್ ಆಯ್ಕೆ ಮಾಡಿಕೊಳ್ಳಲು ಸುಲಭವಾಗುತ್ತೆ ಎಂದು ನುಡಿದರು.

ತರಬೇತಿ ಕಾರ್ಯಾಗಾರವನ್ನು ಭಾರತೀಯ ಜೇಸಿಯ ವಲಯ 15ರ ವಲಯ ತರಬೇತುದಾರ ಕೆ.ಕೆ. ಶಿವರಾಮ್ ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷೆ ಡಾ ಸೋನಿ, ಅಬ್ದುಲ್ ರಝಕ್ ಕಾಪು, ಎನ್ ಎನ್ ಒ ಮಂಗಳೂರು ಘಟಕದ ಪ್ರದಾನ ಕಾರ್ಯದರ್ಶಿ ರಫೀಕ್ ಮಾಸ್ಟರ್ ವಿದ್ಯಾರ್ಥಿಗಳಿಗೆ ತರೆಬೇತಿ ನೀಡಿದರು.

ಎನ್ಎನ್ಒ ಕಮ್ಯುನಿಟಿ ಸೆಂಟರ್ ನ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಅಧ್ಯಕ್ಷತೆ ವಹಿಸಿದರು.
ಪ್ರಧಾನ ಕಾರ್ಯದರ್ಶಿ ಹುಸೇನ್ ಹೈಕಾಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅಬ್ದುಲ್ ಖಾದರ್ ಮೂಡ್ ಗೋಪಾಡಿ, ನಿಹಾರ್ ಅಹ್ಮದ್, ಮಮ್ದು ಇಬ್ರಾಹಿಂ ಶಿರೂರ್, ಝಹಿರ್ ಅಹ್ಮದ್ ಗಂಗೊಳ್ಳಿ, ನಿಹಾಲ್ ಶಿರೂರ್ ಹಾಗೂ ಇನ್ನಿತರ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.