ಡೈಲಿ ವಾರ್ತೆ: 14/Jan/2024

ಇಂಡಿಕಾ ಕಲಾ ಬಳಗದ ಸಮಾಜಿಕ ಕಾರ್ಯ ಪ್ರಶಂಸನೀಯ- ಕಿರಣ್ ಕುಮಾರ್ ಕೊಡ್ಗಿ

ಕೋಟ: ಇಂಡಿಕಾ ಕಲಾ ಬಳಗದ ಸಾಮಾಜಿಕ ಕಾರ್ಯಗಳೇ ಅದರ ಯಶಸ್ಸನ್ನು ತೋರ್ಪಡಿಸುತ್ತದೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಕೋಟದ ಮಣೂರಿನ ಗೀತಾನಂದ ವೇದಿಕೆಯ ಸಭಾಂಗಣದಲ್ಲಿ ಇಂಡಿಕಾ ಕಲಾ ಬಳಗ ಇದರ 14ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮ 2024ಕಾರ್ಯಕ್ರಮದಲ್ಲಿ ಮಾತನಾಡಿ ಸಂಘಸಂಸ್ಥೆಗಳು ತನ್ನ ಕಾರ್ಯವ್ಯಾಪ್ತಿಯ ಚೌಕಟ್ಟನಲ್ಲಿ ಆ ಭಾಗದ ಜನಸಾಮಾನ್ಯರ ತುಡಿತಕ್ಕೆ ಸ್ಪಂದಿಸಿ ನಿರಂತರ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸುತ್ತಿರಬೇಕು ಅದೇ ರೀತಿ ಸಾಹಿತ್ಯಕ ಸಾಂಸ್ಕೃತಿಕ ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆಗೈದವೆನ್ನುಗುರುತಿಸಯವ ಕಾರ್ಯ ಶ್ಲಾಘನೀಯ ಇನ್ನಷ್ಟು ಸಾಧಕರನ್ನು ಗುರುತಿಸಿ ಯಶಸ್ಸಿನ ತೇರಾಗಿ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಹಿರಿಯಯಕ್ಷಗಾನ ಕಲಾವಿದ ಮೊಳಹಳ್ಳಿ ಹೆರಿಯ ನಾಯ್ಕ ಸ್ಮಾರಕ ಇಂಡಿಕಾ ಕಲಾಬಳಗದ ಪುರಸ್ಕಾರವನ್ನು ಯಕ್ಷಕಲಾವಿದ ಎಳ್ಳಂಪಳ್ಳಿ ಜಗನಾಥ್ ಆಚಾರ್ ಇವರಿಗೆ ಪ್ರಧಾನಿಸಲಾಯಿತು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಎಂ.ಜಯರಾಮ ಶೆಟ್ಟಿ ಹಾಗೂ ರಾಜ್ಯ ಅತ್ತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ ಇವರನ್ನು ಅಭಿನಂದಿಸಲಾಯಿತು.
ಕ್ರೀಡಾ ಸಾಧಕಿ ಸಂಜನಾ ಆಚಾರ್ ಗಿಳಿಯಾರ್,ಅಂತಾರಾಷ್ಟ್ರೀಯ ಯೋಗಪಟು ತನ್ವಿತಾ ವಿ,ಶೈಕ್ಷಣಿಕ ಸಾಧಕಿ ಆತ್ಮೀಕ ಶ್ರೀಯಾನ್ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಅಧ್ಯಕ್ಷತೆಯನ್ನು ಕಲಾಬಳಗದ ಅಧ್ಯಕ್ಷ ಎಂ.ಜಯರಾಮ್ ಶೆಟ್ಟಿ ವಹಿಸಿದ್ದರು.

ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಿದರು.
ಯಕ್ಷ ವಿಮರ್ಶಕ ಪ್ರೋ.ಎಸ್ ವಿ ಉದಯ್ ಕುಮಾರ್ ಶೆಟ್ಟಿ ಮಣಿಪಾಲ ಅಭಿನಂದನಾ ನುಡಿಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ
ಸರಕಾರಿ ಪ್ರಥಮದರ್ಜೆ ಕಾಲೇಜು ಹೊಸನಗರ ಇದರ ಕನ್ನಡ ಉಪನ್ಯಾಸಕ ಶ್ರೀಧರ ಶೆಟ್ಟಿ ಅಡಗೋಡಿ,ವಾಹಿನಿ ಯುವಕ ಮಂಡಲದ ಅಧ್ಯಕ್ಷ ರಮೇಶ್ ಹೆಚ್ ಕುಂದರ್,ಮನೋವೈದ್ಯ ಡಾ.ಪ್ರಕಾಶ್ ಸಿ ತೋಳಾರ್,ಪಂಚವರ್ಣ ಯುವಕ‌ ಮಂಡಲದ ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ,ಗೋವಿಗಾಗಿ ಮೇವು ಸ್ಥಾಪಾಕಾಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ, ಊರಿನ ಹಿರಿಯ ಗ್ರಾಮಸ್ಥ ದಾರೋಜ್ಜಿ ಆನಂದ್ ಕಾಂಚನ್,ಪಡುಕರೆ ಸಂಯುಕ್ತ ಪ್ರೌಢಶಾಲಾ ಪ್ರಾಥಮಿಕ ವಿಭಾಗದ ಎಸ್ ಡಿ ಎಂ ಸಿ ಅಧ್ಯಕ್ಷ ನಾಗರಾಜ್,ಕಲಾ ಬಳಗದ ನಿಕಟಪೂರ್ವ ಅಧ್ಯಕ್ಷ ಸಂತೋಷ್ ತಿಂಗಳಾಯ,ಗೋವನ್ ಫ್ರೆಶ್ ಮಾಲಿಕ ಬಿಜು ನಾಯರ್ ಮತ್ತಿತರರು ಉಪಸ್ಥಿತರಿದ್ದರು. ಕಲಾಬಳಗ ಸದಸ್ಯ ಪ್ರಭಾಕರ್ ಮಣೂರು ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಂತೋಷ್ ಕುಮಾರ್ ಕೋಟ, ಸುಜಾತ ಬಾಯರಿ ನಿರೂಪಿಸಿದರು. ಪತ್ರಕರ್ತ ರವೀಂದ್ರ ಕೋಟ ವಂದಿಸಿದರು. ಕಾರ್ಯಕ್ರಮದ ನಂತರ ಅಭಿನಯ ಉಡುಪಿ ಇವರಿಂದ ಶಾಂಭವೀ ನಾಟಕ ಪ್ರದರ್ಶನಗೊಂಡಿತು.