ಡೈಲಿ ವಾರ್ತೆ: 23/Mar/2024

ಸಕ್ಕರೆ ಸೇವನೆ ನಿಲ್ಲಿಸುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ!

ಸಿಹಿ ಎಂದರೆ ಯಾರಿಗೆ ಇಷ್ಟವಿಲ್ಲ!. ಸಿಹಿ ವಿಷಯ ಬಂದರೆ ಹೆಚ್ಚಿನ ಜನರು ಅಗತ್ಯಕ್ಕಿಂತ ಹೆಚ್ಚಿನದನ್ನು ಸೇವಿಸುತ್ತಾರೆ. ನಮ್ಮಲ್ಲಿ ಬಹುತೇಕ ಜನರು ಶಿಫಾರಸ್ಸು ಮಾಡಿದಕ್ಕಿಂತ ಹೆಚ್ಚು ಸಕ್ಕರೆಯನ್ನು ಸೇವಿಸುತ್ತಾರೆ. ಅತಿಯಾದ ಸಕ್ಕರೆ ದೇಹದಲ್ಲಿ ಉರಿಯೂತಕ್ಕೆ ಕಾರಣವಾಗಬಹುದು ,ಇದು ತೂಕ ಹೆಚ್ಚಾಗುವುದನ್ನು ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೂ ಸಹ ಕಾರಣವಾಗುತ್ತದೆ. ಸಕ್ಕರೆ ಡಿಟಾಕ್ಸ್ ಎಂದರೆ ಹೆಸರೇ ಸೂಚಿಸುವಂತೆ ನೀವು ದೇಹದಿಂದ ಹೆಚ್ಚುವರಿ ಸಕ್ಕರೆಯನ್ನು ತೊಡೆದು ಹಾಕಲು ಪ್ರಯತ್ನಿಸುವುದಾಗಿದೆ.

ದೈನಂದಿನ ಆಹಾರದ ಭಾಗಗಳಲ್ಲಿ ಸಕ್ಕರೆಯೂ ಒಂದು. ಬೆಳಗಿನ ಚಹಾ ಅಥವಾ ಕಾಫಿಗೆ ಸಕ್ಕರೆ ಸೇರಿಸುವುದರೊಂದಿಗೆ ಇದರ ಪ್ರಯಾಣ ಪ್ರಾರಂಭವಾಗುತ್ತದೆ. ಆ ದಿನ ತಿನ್ನುವ ಪ್ರತಿಯೊಂದು ಸಿಹಿಯಲ್ಲಿಯೂ ಸಕ್ಕರೆ ಹೊಂದಿರುತ್ತದೆ. ಆದರೆ ಸಕ್ಕರೆ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಯಾವುದೇ ಪ್ರಯೋಜನೆ ಇಲ್ಲ. ಬದಲಿಗೆ ಸಕ್ಕರೆಯು ಅನೇಕ ಆರೋಗ್ಯ ಸಮಸ್ಯೆಗಳನ್ನು ಸಹ ಉಂಟುಮಾಡುತ್ತದೆ. ಹಾಗಾಗಿ ಸಕ್ಕರೆಯನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ತುಂಬಾ ಒಳ್ಳೆಯದು ಎನ್ನುತ್ತಾರೆ ಪೌಷ್ಟಿಕತಜ್ಞರು.

ಸಕ್ಕರೆಯನ್ನು ತ್ಯಜಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ತಿಳಿಯೋಣ.

1. ತೂಕ ಇಳಿಸಿಕೊಳ್ಳಲು ಬಯಸುವವರು ಸಕ್ಕರೆ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು.
2. ಆಯಾಸವನ್ನು ಕಡಿಮೆ ಮಾಡುತ್ತದೆ.
3. ಸಕ್ಕರೆಯನ್ನು ತ್ಯಜಿಸುವುದರಿಂದ ಅಧಿಕ ರಕ್ತದೊತ್ತಡ, ಟ್ರೈಗ್ಲಿಸರೈಡ್‌ಗಳು, ದೇಹದಲ್ಲಿ ಉರಿಯೂತದಂತಹ ಸಮಸ್ಯೆಗಳು ಉಂಟಾಗುವುದಿಲ್ಲ
4. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು.
5. ಬಾಯಿಯ ಆರೋಗ್ಯ ಮತ್ತು ಹಲ್ಲಿನ ಆರೋಗ್ಯ ಕಾಪಾಡಬಹುದು.
6. ದೇಹದಲ್ಲಿ ಶಕ್ತಿಯ ಸ್ಥಿರವಾಗಿರುತ್ತದೆ. ಶಕ್ತಿಯ ಮಟ್ಟಗಳು ಹಠಾತ್ತನೆ ಕಡಿಮೆಯಾಗುವುದಿಲ್ಲ ಅಥವಾ ಗರಿಷ್ಠ ಮಟ್ಟಕ್ಕೆ ಏರುವುದಿಲ್ಲ.
7. ಮನಸ್ಥಿತಿ (mood) ಆರೋಗ್ಯಕರವಾಗಿರುತ್ತದೆ
8. ಚರ್ಮವು ಕಾಂತಿಯುತವಾಗುತ್ತದೆ.
ಸಕ್ಕರೆಯನ್ನು ತಪ್ಪಿಸುವುದರಿಂದ ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡಬಹುದು.
9. ಕಿರಿಕಿರಿ ಮತ್ತು ಕೋಪ ಬರುವುದಿಲ್ಲ.
10. ಏಕಾಗ್ರತೆ (Concentration) ಹೆಚ್ಚುತ್ತದೆ.
ಚರ್ಮದ ಆರೋಗ್ಯವನ್ನು ಸುಧಾರಿಸಬಹುದು.