ಡೈಲಿ ವಾರ್ತೆ: 14/April/2024

ಹರಪನಹಳ್ಳಿ ಪಟ್ಟಣದ ಹೆಚ್.ಪಿ.ಎಸ್ ಪಿಯು ಕಾಲೇಜಿಗೆ ದ್ವಿತೀಯ ಪಿಯುಸಿಹರಪನಹಳ್ಳಿ ಪಟ್ಟಣದ ಹೆಚ್.ಪಿ.ಎಸ್ ಪಿಯು ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

  • ಹೆಚ್.ಪಿ.ಎಸ್ ಪಿಯು ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡ 90ರಷ್ಟು ಫಲಿತಾಂಶ : ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ

ಹರಪನಹಳ್ಳಿ :  ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ  ಹೆಚ್.ಪಿ.ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ  ಫಲಿತಾಂಶವನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜಿಗೆ ಶೇಕಡ 90ರಷ್ಟು ಫಲಿತಾಂಶ ಬಂದಿದ್ದು, ಉತ್ತಮ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳಿಗೆ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷರಾದ ಪಿ.ಮಹಾಬಲೇಶ್ವರ ಗೌಡ್ರು ಹಾಗೂ ಪದಾಧಿಕಾರಿಗಳು, ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಸಿ ಬೆನಕನಕೊಂಡರವರು, ಬೋಧಕ ಮತ್ತು ಬೋಧಕೇತರ ವರ್ಗದವರು ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪಟ್ಟಣದ ಹೆಚ್.ಪಿ.ಎಸ್ ಪಿಯು ಕಾಲೇಜಿಗೆ 2023-24ನೇ ಶೈಕ್ಷಣಿಕ ಸಾಲಿನಲ್ಲಿ  ಅತ್ಯುನ್ನತ ಶ್ರೇಣಿ 24ವಿದ್ಯಾರ್ಥಿಗಳು, ಪ್ರಥಮ ಶ್ರೇಣಿ 61ವಿದ್ಯಾರ್ಥಿಗಳು, ದ್ವಿತೀಯ ಶ್ರಣಿ 33ವಿದ್ಯಾರ್ಥಿಗಳು, ತೃತೀಯ ಶ್ರೇಣಿ 12ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು  ಶೇಕಡ 90% ಫಲಿತಾಂಶ ಕಾಲೇಜಿಗೆ ಬಂದಿರುತ್ತದೆ.

ಹಿರೇಗೌಡರ ದೇವೇಂದ್ರಪ್ಪ ಕನ್ನಡದಲ್ಲಿ 96ಅಂಕಗಳು, ಸಂಸ್ಕೃತದಲ್ಲಿ 97ಅಂಕಗಳು, ಇತಿಹಾಸದಲ್ಲಿ 98ಅಂಕಗಳು, ಭೂಗೋಶಾಸ್ತ್ರದಲ್ಲಿ 97ಅಂಕಗಳು, ಐಚ್ಚಿಕ ಕನ್ನಡದಲ್ಲಿ 97ಅಂಕಗಳು, ಶಿಕ್ಷಣಶಾಸ್ತ್ರ ವಿಷಯದಲ್ಲಿ 99ಅಂಕಗಳು, ಒಟ್ಟು 584 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ.

ಮಡ್ರಳ್ಳಿ ಲಕ್ಷ್ಮೀ 573ಅಂಕಗಳು, ಪಿ.ಮಾನಸ 569, ಲಂಬಾಣಿ ಕುಬೇರ 561, ಲಕ್ಷ್ಮವ್ವ ಹೆಚ್ ಯಲವಜ್ಜಿ 557,  ಲಂಬಾಣಿ ಜನ್ಯಗೌಡ 551, ಹೆಚ್.ರಕ್ಷಿತ 547, ಕೆ.ಕನಕ 543, ಎಲ್.ಸುನೀಲ್ 542, ಕೆ.ತೇಜಸ್ವಿನಿ 538, ಕೆ.ಮೈಲಾರಿ 537, ಐ.ನಾಗವೇಣಿ 537, ಎನ್.ಹೆಚ್. ಸಾಕ್ಷಿ  534, ರೇಣುಕಾ 533, ಟಿ.ವೀಣಾ 530, ಹೆಚ್. ಕಾದಂಬರಿ 529, ಪಿ.ಹೆಚ್. ಲಕ್ಷ್ಮೀ 524, ಬಡಗಡ್ಡಿ ಮನೋಹರ  521, ಕೆ.ಕಿರಣ 521, ಹೆಚ್.ಜ್ಯೋತಿ 518, ಆರ್.ತರುಣ್ 518, ಕೊಗಳಿ ನಾಗವೇಣಿ 515, ಎಸ್.ನಿಖೀಲ್ 514 ಅತ್ಯಧಿಕ ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್.ಪಿ.ಎಸ್  ಪದವಿ ಪೂರ್ವ ಕಾಲೇಜು ಶೇಕಡ90ರಷ್ಟು ಅತ್ಯುತ್ತಮ ಫಲಿತಾಂಶ ಬಂದಿದೆ. ಅತ್ಯುತ್ತಮ ಫಲಿತಾಂಶ ಪಡೆದು ಕಾಲೇಜಿಗೆ ಕೀರ್ತಿ ತಂದ  ವಿದ್ಯಾರ್ಥಿಗಳಿಗೆ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷರಾದ ಪಿ.ಮಹಾಬಲೇಶ್ವರ ಗೌಡ್ರು ಹಾಗೂ ಪದಾಧಿಕಾರಿಗಳು, ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವರ್ಗದವರು ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

2024-25ನೇ ಶೈಕ್ಷಣಿಕ ಸಾಲಿಗೆ ಹೆಚ್.ಪಿ.ಎಸ್ ಪಿಯು ಕಾಲೇಜಿನಲ್ಲಿ  ಖಾಲಿ ಇರುವ ಎಲ್ಲಾ ವಿಷಯಗಳಿಗೆ ಪೂರ್ಣಾವಧಿ ಉಪನ್ಯಾಸಕರನ್ನ ಶ್ರೀ ಸಂಸ್ಥೆ ನೇಮಕ ಮಾಡಿದೆ ಎಂದು ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷರಾದ ಪಿ.ಮಹಾಬಲೇಶ್ವರ ಗೌಡ್ರು ತಿಳಿಸಿದ್ದಾರೆ.

ಹೆಚ್.ಪಿ.ಎಸ್ ಪಿಯು ಕಾಲೇಜು ಭವ್ಯವಾದ ಕಟ್ಟಡ ಹೊಂದಿದ್ದು, ವಿಜ್ಞಾನ ವಿಭಾಗದಲ್ಲಿ ಉತ್ತಮ ಪ್ರಯೋಗಾಲಯ, ಹಾಗೂ ಅತ್ಯುತ್ತಮ ಗ್ರಂಥಾಲಯ, ಉತ್ತಮ ಕ್ರೀಡಾ ಸಾಮಾಗ್ರಿಗಳನ್ನು ಹೊಂದಿದೆ. ಗ್ರಾಮೀಣ ಪ್ರದೇಶದ  ಎಸ್ಸಿ- ಎಸ್ಟಿ ಬಡ ಮಕ್ಕಳೇ ನಮ್ಮ ಕಾಲೇಜಿನಲ್ಲಿ ಪ್ರವೇಶ ಪಡೆದು ಅತ್ಯುತ್ತಮ ಸಾಧನೆ ಮಾಡಿ ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದು ಹೆಮ್ಮೆಯ ಸಂಗತಿ ಎಂದು ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷರಾದ ಪಿ.ಮಹಾಬಲೇಶ್ವರ ಗೌಡ್ರು ತಿಳಿಸಿದ್ದಾರೆ