ಡೈಲಿ ವಾರ್ತೆ: 16/April/2024



ಕೆ.ಸಂತೋಷ್ ಶೆಟ್ಟಿ, ಮೊಳಹಳ್ಳಿ ಕುಂದಾಪುರ (ಪತ್ರಕರ್ತರು/ ಮಾಧ್ಯಮ ವಿಶ್ಲೇಷಕರು)

ಮರೆ ಮಾಚಿದ  ಬಣ್ಣದ ಬದುಕಿನ ನಕ್ಷತ್ರ:ಕಳ್ಳ- ಕುಳ್ಳ, ಪ್ರಚಂಡ ಕುಳ್ಳ, ಆಪ್ತಮಿತ್ರ ಖ್ಯಾತಿಯ ದ್ವಾರಕೇಶ್ ನೆನಪು ಮಾತ್ರ..! ಬಣ್ಣದ ಬದುಕಿನ ಯಾತ್ರೆ ಮುಗಿಸಿದ ಕಿಟ್ಟು ಪುಟ್ಟು ಪತ್ನಿ ನಿಧಾನದ ದಿನವೇ ಬದುಕಿನ ಯಾತ್ರೆ ಮುಗಿಸಿದ ದ್ವಾರಕೇಶ್…!’

ದ್ವಾರಕೀಶ್, ಚಿತ್ರರಂಗದ ಮೇರು ನಟ.  ಆಗಸ್ಟ್ 19-1942,ರಂದು ಹುಣಸೂರು ನಲ್ಲಿ ಶಾಮರಾವ್ ಮತ್ತು ಜಯಮ್ಮರವರಿಗೆ ಜನಿಸಿದರು. ಶಾರದಾ ವಿಲಾಸ ಮತ್ತು ಬನುಮಯ್ಯ ಶಾಲೆಯಲ್ಲಿ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನಂತರ CPC ಪಾಲಿಟೆಕ್ನಿಕ್ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಮುಗಿಸಿದರು. ನಂತರ ಅವರ ಸೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಶುರುಮಾಡಿದರು.೧೯೬೩ರಲ್ಲಿ. ಅವರು ವ್ಯಾಪಾರ ಬಿಟ್ಟು ಸಿನೆಮಾ ನಟನೆಯನ್ನು ಆಯ್ದುಕೊಂಡರು. ಕನ್ನಡದ ಪ್ರಮುಖ ನಟರಾದ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಜೋಡಿ ಎಂದು ಪ್ರಸಿದ್ಧವಾಗಿತ್ತು

ಕನ್ನಡ  ಚಿತ್ರರಂಗದ ಮೇರು ಪರ್ವತ, ಸಿನಿಮಾ ಲೋಕದಲ್ಲಿ ತನ್ನದೇ ಆದಂತಹ ಚಾಪು ಮೂಡಿಸಿದ ವ್ಯಕ್ತಿತ್ವ ಹಾಸ್ಯ ನಟನೆಯ ಮೂಲಕ ರಾಜ್ಯದ ಜನತೆಯ ಕನಸನ್ನ ನನಸಾಗಿಸಿದವರು. ದ್ವಾರಕೀಶ್ ಕಾಮಿಡಿಯ ಸಿನಿಮಾ ವೆಂದರೆ ಮಕ್ಕಳೆಲ್ಲವು ಮನ ಮಂದಿ ಎಲ್ಲವೂ ಕೂತು ನೋಡುವಂತಹ ಸಿನಿಮಾ ಸೃಷ್ಟಿಸುತ್ತಿದ್ದರು.

ದ್ವಾರಕೀಶ್  ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ಒಪ್ಪಿಕೊಳ್ಳೋದು ಕಷ್ಟ ಆಗುತ್ತಿದೆ. ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು. ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಹೆಸರು ಮಾಡಿದ್ದರು. ಅವರನ್ನು ಕಳೆದುಕೊಂಡಿದ್ದು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಆಗಿದೆ. ರಾಜ್ಕುಮಾರ್, ವಿಷ್ಣುವರ್ಧನ್ ಸೇರಿ ಹಲವು ಕಲಾವಿದರ ಜೊತೆ ದ್ವಾರಕೀಶ್ ನಟಿಸಿ ಫೇಮಸ್ ಆದರು. ವಿಷ್ಣುವರ್ಧನ್ ಜೊತೆ ಅವರಿಗೆ ಒಳ್ಳೆಯ ಬಾಂಧವ್ಯ ಇತ್ತು. ಆದರೆ, ನಂತರ ಇಬ್ಬರೂ ಬೇರೆ ಆಗುವಂಥಾಯಿತು. ಆ ಬಗ್ಗೆ ಇಲ್ಲಿದೆ ಮಾಹಿತಿ.1975ರಲ್ಲಿ ರಿಲೀಸ್ ಆದ ‘ಕಳ್ಳ ಕುಳ್ಳ’ ಸಿನಿಮಾದಲ್ಲಿ ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಒಟ್ಟಾಗಿ ನಟಿಸಿದರು. ಇವರ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಬೆಳೆಯಲು ಈ ಸಿನಿಮಾ ಸಹಕಾರಿ ಆಯಿತು. 1977ರ ‘ಕಿಟ್ಟು ಪುಟ್ಟು’, ‘ಸಿಂಗಾಪುರನಲ್ಲಿ ರಾಜ ಕುಳ್ಳ’, ‘ಗುರು ಶಿಷ್ಯರು’, ‘ಪ್ರಚಂಡ ಕುಳ್ಳ’, ‘ಆಪ್ತಮಿತ್ರರು’ ಸಿನಿಮಾಗಳಲ್ಲಿ ಇವರು ಒಟ್ಟಾಗಿ ನಟಿಸಿದ್ದರು. ಈ ಪೈಕಿ ಕೆಲವು ಸಿನಿಮಾಗಳನ್ನು ದ್ವಾರಕೀಶ್ ಅವರೇ ನಿರ್ಮಾಣ ಮಾಡಿದ್ದರು.

ಬಳಿಕ ದ್ವಾರಕೀಶ್ ಅವರು ಡಾ. ರಾಜ್ಕುಮಾರ್ ನಟನೆಯ ‘ಭಾಗ್ಯವಂತರು’ ಸಿನಿಮಾವನ್ನು ನಿರ್ಮಿಸಿದರು. ಅದಾದ ಬಳಿಕ ಮತ್ತೆ ಡಾ. ರಾಜ್ಕುಮಾರ್ ಸಿನಿಮಾಗಳಿಗೆ ದ್ವಾರಕೀಶ್ ಬಂಡವಾಳ ಹೂಡಲು ಸಾಧ್ಯವಾಗಲಿಲ್ಲ. ಯಾಕೆಂದರೆ, ಅದಾಗಲೇ ಪಾರ್ವತಮ್ಮ ರಾಜ್ಕುಮಾರ್ ಅವರು ತಮ್ಮದೇ ‘ವಜ್ರೇಶ್ವರಿ ಕಂಬೈನ್ಸ್’ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದರು. ರಾಜ್ಕುಮಾರ್ ಅವರ ಎಲ್ಲ ಸಿನಿಮಾಗಳು ‘ವಜ್ರೇಶ್ವರಿ ಕಂಬೈನ್ಸ್’ ಮೂಲಕವೇ ನಿರ್ಮಾಣವಾಗಲು ಆರಂಭವಾದವು. ಹಾಗಾಗಿ ದ್ವಾರಕೀಶ್ ಅವರಿಗಾಗಲಿ ಅಥವಾ ಬೇರೆ ನಿರ್ಮಾಪಕರಿಗಾಗಲಿ ಅಣ್ಣಾವ್ರ ಕಾಲ್ಶೀಟ್ ಸಿಗದಾಯಿತು.


1970ರ ದಶಕದಲ್ಲಿ ವಿಷ್ಣುವರ್ಧನ್ ಸ್ಟಾರ್ ನಟನಾದರು. ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅವರು ‘ಕಳ್ಳ ಕುಳ್ಳ’ ಸಿನಿಮಾದಲ್ಲಿ ನಟಿಸಿದರು. ಆ ಬಳಿಕ ಅವರಿಬ್ಬರು ಏಕವಚನದಲ್ಲಿ ಮಾತನಾಡಿಕೊಳ್ಳುವಷ್ಟು ಆಪ್ತರಾದರು. ನಿರ್ಮಾಪಕನಾಗಿ ಸಕ್ರಿಯರಾಗಿದ್ದ ದ್ವಾರಕೀಶ್ ಅವರಿಗೆ ಈ ರೀತಿಯ ಸ್ಟಾರ್ ಕಲಾವಿದರ ಕಾಲ್ಶೀಟ್ ಅಗತ್ಯವಾಗಿತ್ತು. ಅತ್ತ ಡಾ. ರಾಜ್ಕುಮಾರ್ ಅವರ ಡೇಟ್ಸ್ ಸಿಗದಿದ್ದಾಗ, ಇತ್ತ ದ್ವಾರಕೀಶ್ ಅವರಿಗೆ ವಿಷ್ಣು ಅವರ ಕಾಲ್ಶೀಟ್ ಸುಲಭದಲ್ಲಿ ಸಿಗುವಂತಾಯಿತು. ಹಾಗಾಗಿ ಅವರು ವಿಷ್ಣುಗಾಗಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದರು.

ದ್ವಾರಕೀಶ್ ಮಾಡಿದ 50 ಚಿತ್ರಗಳಲ್ಲಿ 19 ಸಿನಿಮಾಗಳಲ್ಲಿ ವಿಷ್ಣುವರ್ಧನ್ ನಟಿಸಿದ್ದರು. ‘ರಾಯರು ಬಂದರು ಮಾವನ ಮನೆಗೆ’ ಸಿನಿಮಾ ಮಾಡಲು ವಿಷ್ಣುವರ್ಧನ್ ಡೇಟ್ಸ್ಗಾಗಿ ನಾಲ್ಕು ವರ್ಷ ಕಾದಿದ್ದರು ದ್ವಾರಕೀಶ್. ರಕ್ತ ಸಂಬಂಧಕ್ಕಿಂತ ದೊಡ್ಡದಾಗಿತ್ತು ಇವರ ಸಂಬಂಧ. ವಿಷ್ಣುವರ್ಧನ್ ನಿಧನದ ನಂತರ ದ್ವಾರಕೀಶ್ ಸಾಕಷ್ಟು ದುಃಖಕ್ಕೆ ಒಳಗಾಗಿದ್ದರು. ಕನ್ನಡ ಚಿತ್ರರಂಗದ  ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ  (81) ನಿಧನರಾಗಿದ್ದು, ಅಂತ್ಯಕ್ರಿಯೆ ಬುಧವಾರ (ಏ.17) ಬೆಳಿಗ್ಗೆ 11:30ಕ್ಕೆ ಚಾಮರಾಜಪೇಟೆಯ ಟಿಆರ್ ಮೀಲ್ನಲ್ಲಿ ನಡೆಯಲಿದೆ. ದರ್ಶನಕ್ಕೆ ದ್ವಾರಕೀಶ ಅವರ ಪಾರ್ಥೀವ ಶರೀರವು ಬುಧವಾರ ಬೆಳಗಿನ ಜಾವದವರೆಗು ಅವರ ನಿವಾಸದಲ್ಲಿಯೇ ಇರಲಿದ್ದು, ಗಣ್ಯರ ಮತ್ತು ಕುಟುಂಬಸ್ಥರು ಅಂತಿಮ ದರ್ಶನ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 7.30 ರ ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಕಲಾವಿದರು ಹಾಗೂ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 11 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, 11 ಗಂಟೆಯ ನಂತರ ಶವವನ್ನು ಚಾಮರಾಜಪೇಟೆಯ ಟಿಆರ್ಮೀಲ್ ಚಿತಾಗಾರಕ್ಕೆ ತರಲಾಗುತ್ತದೆ. ಇಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.