ಡೈಲಿ ವಾರ್ತೆ: 17/April/2024

ಸಾಗರ: ಆಟವಾಡುತ್ತ ಆಯತಪ್ಪಿ ಬಾವಿಗೆ ಬಿದ್ದು 3 ವರ್ಷದ ಮಗು ಸ್ಥಳದಲ್ಲೇ ಸಾವು!

ಸಾಗರ: ಆಟವಾಡುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ನಗರದ ಎಸ್‌ಎನ್ ನಗರದಲ್ಲಿ ಬುಧವಾರ ನಡೆದಿದೆ.
ಮನೆ ಹಿಂಭಾಗದ ಬಳಿ ಆಟವಾಡುತ್ತಿದ್ದಾಗ ಬಾವಿಗೆ ಬಿದ್ದು ಮನ್ನತ್ (3) ಮೃತಪಟ್ಟಿದ್ದಾಳೆ.

ಬಾಲಕಿ ಆಟವಾಡುತ್ತಾ ಬಾವಿ ಬಳಿ ತೆರಳಿದ್ದಾಳೆ. ಈ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾಳೆ. ಮಗುವಿನ ತಾಯಿ ತತ್ ಕ್ಷಣ ನೋಡಿ ಕೂಗಿಕೊಂಡಿದ್ದಾರೆ. ಸ್ಥಳೀಯರು ಮಗುವನ್ನು ಮೇಲಕ್ಕೆತ್ತಿದ್ದು, ಮಗುವಿನ ತಲೆ ಹಾಗೂ ಹಣೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಮನ್ನತ್ ಅಷ್ಟಾರಲ್ಲಾಗಲೇ ಮೃತಪಟ್ಟಿದ್ದಳು.