



ಡೈಲಿ ವಾರ್ತೆ: 27/April/2024


ಎರಡು ಕುಟುಂಬಗಳ ನಡುವಿನ ಗಲಾಟೆ-ಮೂರು ವರ್ಷದ ಮಗುವಿನ ಹತ್ಯೆ!
ಬೆಳಗಾವಿ: ಎರಡು ಕುಟುಂಬಗಳ ನಡುವಿನ ಗಲಾಟೆಯಲ್ಲಿ ಮೂರು ವರ್ಷದ ಮಗುವೊಂದನ್ನು ಎದೆಗೆ ಕಾಲಿಟ್ಟು ಒತ್ತಿ ಕೊಂದ ಭೀಕರ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದಲ್ಲಿ ನಡೆದಿದೆ.
ಶ್ರೀನಿಧಿ ಕಾಡಪ್ಪ ಕಾಳಾಪಾಟೀಲ್ (3) ಮೃತ ಮಗು.
ಜೋತಿಭಾ ತುಕಾರಾಮ ಬಾಬಾಬರ ಎಂಬಾತ ಮಗುವನ್ನು ಭೀಕರವಾಗಿ ಕೊಲೆ ಮಾಡಿದ ಆರೋಪಿ. ಹಣಕಾಸಿನ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿದೆ. ಈ ವೇಳೆ ಜಗಳ ತಾರಕಕ್ಕೇರಿ ಜೋತಿಭಾ ತುಕಾರಾಮ ಬಾಬಾಬರ ಮಗುವಿನ ಎದೆ ಮೇಲೆ ಕಾಲಿಟ್ಟು ಕೊಂದಿದ್ದಾನೆ ಎನ್ನಲಾಗಿದೆ. ಮೃತ ಮಗುವಿನ ಕುಟುಂಬಸ್ಥರ ರೋದನ ಮುಗಿಳು ಮುಟ್ಟಿದೆ.
ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಈ ಸಂಬಂಧ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.